ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ

ವರದಿಗಾರರು : ;ಶ್ರೀನಿವಾಸ್ ಹೆಚ್
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 13+

ಕುರುಬ ಸಮಾಜವನ್ನ ಎಸ್ಟಿಗೆ ಸೇರಿಸುತ್ತಾರೆ ಅಂದ್ರೆ....ಸೇರಿಸಲಿ ಬಿಡಿ ಯಾರು ಬೇಡಾ ಅಂತಾರೇ. ಆದರೆ ಜನಸಂಖ್ಯೆ ಜಾಸ್ತಿ ಆದಂತೆ ಮೀಸಲಾತಿ ಪರ್ಸೆಂಟೇಜ್ ಹೆಚ್ಚಿಸಬೇಕು. . ಸಮುದಾಯಗಳನ್ನ ಎಸ್ಸಿ ಅಥವಾ ಎಸ್ಟಿ ಪಟ್ಟಿಗೆ ಸೇರಿಸುವುದು, ತೆಗೆಯೋದು ಕೇಂದ್ರ ಸರ್ಕಾರದ ಜವಾಬ್ದಾರಿ.

ಅದು ಕೇಂದ್ರ ಸರ್ಕಾರದ ಕಾಯ್ದೆ, ಕೇಂದ್ರಕ್ಕೆ ಶಿಫಾರಸು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ರಾಜ್ಯ ಸರ್ಕಾರಗಳು ಜನರ ಮನವಿಗಳನ್ನ ಪರಿಶೀಲನೆ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡ್ತೇವೆ. ಅದನ್ನ ರಾಷ್ಟ್ರಪತಿಗಳು ಅಂಕಿತ ಹಾಕಿದ ಮೇಲೆ ಜಾರಿಯಾಗುತ್ತದೆ. ಈ ರೀತಿ ನಿಯಮ ಇದೆ.. ಕುರುಬ ಸಮುದಾಯವನ್ನ ಎಸ್ಟಿ ಪಟ್ಟಿಗೆ ಸೇರಿಸುತ್ತಾರೆ ಅಂದ್ರೆ ಸೇರಿಸಲಿ ಬಿಡಿ, ಯಾರು ಬೇಡ ಅಂತಾರೆ.

ಆದರೆ, ನನ್ನ ಒತ್ತಾಯ ಏನು ಅಂದ್ರೆ, ಜನಸಂಖ್ಯೆ ಎಷ್ಟು ಜಾಸ್ತಿ ಸೇರಿಸುತ್ತಾರೆ. ಅಷ್ಟು ರಿಸವೇಷನ್ ಪರ್ಸೆಂಟೇಜ್ನ ಜಾಸ್ತಿ ಮಾಡಬೇಕು. ಈಗ ಎಸ್ಸಿಗೆ 17ರಷ್ಟು ರಿಸವೇಷನ್ ಇಟ್ಟಿದ್ದೀರಿ.

ಶೇ. 17ರಷ್ಟು ಜನಸಂಖ್ಯೆ ಇದೆ ಅಂತಾ ಸರ್ವೆಯಲ್ಲಿ ಹೇಳಿದೆ. ಎಸ್ಟಿ ಜನಸಂಖ್ಯೆ ಶೇ. 7ರಷ್ಟು ಇದೆ ಅಂತಾ ಶೇ.7ರಷ್ಟು ಮೀಸಲಾತಿ ಇಟ್ಟಿದ್ದಾರೆ. ಯಾವುದೇ ಸಮುದಾಯಗಳನ್ನ ಎಸ್ಸಿ ಅಥವಾ ಎಸ್ಟಿ ಗೆ ಸೇರಿಸಲಿ. ಆದ್ರೆ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಇರಬೇಕು ಅಂತಾ ನಾನು ಹೇಳ್ತೇನೆ. ಅದನ್ನ ಬಿಟ್ಟು ಬೇರೇನೂ ಹೇಳಲ್ಲ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand