
ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025
*ಮನೆಗೆ ಆಕಶ್ಮೀಕ ವಿದ್ಯುತ್ ಶಾರ್ಟ್ ಸರ್ಕ್ಯುಟ್ ಆಗಿ ಮನೆ ಸುಟ್ಟು ಭಸ್ಮವಾಗಿದೆ*
ವರದಿಗಾರರು : ಹುಲಗಪ್ಪ ಎಮ್ ಹವಾಲ್ದಾರ
ವರದಿ ಸ್ಥಳ :ಸುರಪುರ
ಒಟ್ಟು ಓದುಗರ ಸಂಖ್ಯೆ : 123+
ದಿನಾಂಕ : 16/08/2025/ರಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೈಚಬಾಳ ಗ್ರಾಮದ ಶ್ರೀಮತಿ ಶಾಂತಮ್ಮ ಗಂಡ ಯಮನಪ್ಪ ಮಾದರ್ ಇವರ ಮನೆಗೆ ಆಕಶ್ಮೀಕ ವಿದ್ಯುತ್ ಶಾರ್ಟ್ ಸರ್ಕ್ಯುಟ್ ಆಗಿ ಮನೆಯ ದಿನೊಪಯೋಗಿ ವಸ್ತುಗಳು ಹಾಗೂ ನಗದು 40.000 ರೂಪಾಯಿ ಹಣ ಹಾಗೂ ಒಂದೂವರೆ ತೊಲಾ ಬಂಗಾರ. ಅಕ್ಕಿ. ಜೋಳ. ಗೋದಿ. ಬಟ್ಟೆ ಹಾಗೂ ಇನ್ನಿತರ ದಿನೊಪಯೋಗಿ ವಸ್ತುಗಳು ವಿದ್ಯುತ್ ಶಾಕಕ್ಕೆ ಆಹುತಿ ಹಾಗಿರುವ ಘಟನೆ ನಡೆದಿದ್ದು ಇಂದು ತಿಳಿದು ಬಂದಿದೆ
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಕೃತಿ ವಿಕೋಪದ ನಿಧಿಯಲ್ಲಿ ಅನುದಾನ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಆಹ್ವಾನಿಸಿ ಸ್ಥಳ ಮಹಜರು ಮಾಡಿ ಆ ಸಂತ್ರಸ್ತರಿಗೆ ಪರಿಹಾರ ಒದಗಿಸಿ ಕೊಡಬೇಕೆಂದು ಅಧಿಕಾರಿಗಲ್ಲಿ ಮನವಿ ಮಾಡಲಾಯಿತು
ಈ ಸಂದರ್ಭದಲ್ಲಿ ಪ್ರೋ B ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನ ಸಂಚಾಲಕರು ತಾಯಪ್ಪ ಕಟ್ಟಿಮನಿ ಹಾಗೂ ತಾಲೂಕ ಸಮಿತಿ ಹುಣಸಗಿ ಸಂಘಟನ ಸಂಚಾಲಕರಾದ . ಸುರೇಶ ಹಾದಿಮನಿ. ಶಿವರಾಜ್ ಗುಡಿಮನಿ. ಮಹಾಂತೇಶ್ ತಮ್ಮದೊಡ್ಡಿ. ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















