
ಲೈವ್ ಟಿವಿ ನ್ಯೂಸ್

ದಿನಾಂಕ : 08-08-2025
*ಶಾಸಕ ತುನ್ನೂರ್ ಗೆ ಸಚಿವ ಸ್ಥಾನ ನೀಡಿ, ತೇಕರಾಳ್ ಮನವಿ*
ವರದಿಗಾರರು : ರಾಜಶೇಖರ ಮಾಲಿ ಪಾಟೀಲ್
ವರದಿ ಸ್ಥಳ :ಶಹಾಪುರ
ಒಟ್ಟು ಓದುಗರ ಸಂಖ್ಯೆ : 42+
*ಯಾದಗಿರಿ, ಆಗಸ್ಟ್ 07* ವಿಧಾನಸಭಾ ಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ರವರು ಹುಟ್ಟಿನಿಂದಲೂ ಪ್ರಸ್ತುತ 75 ರ ಇಳಿವಯಸ್ಸಿನ ವರೆಗೂ ಕಾಂಗ್ರೆಸ್ ಪಕ್ಷದ ಅಭಿಮಾನಿಯಾಗಿ, ಕಾರ್ಯಕರ್ತರಾಗಿ, ಜನ ನಾಯಕರಾಗುವ ಮೂಲಕ ಮಾದರಿಯಾಗಿ ಹೊರಹೊಮ್ಮಿರುವ ಯಾದಗಿರಿ ನಗರ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರಿಗೆ ಮುಂಬರುವ ಅಧಿವೇಶನದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ತೇಕರಾಳ ಗ್ರಾಮ ಪಂಚಾಯತ್ ಸದಸ್ಯ ಹಣಮಂತ್ರಾಯ ಗೌಡ ಮಾಲಿ ಪಾಟೀಲ್ ಮನವಿ ಮಾಡಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕರು ಬಡವರ ಪರ ಹಾಗೂ ಅಭಿವೃದ್ಧಿಪರ ಕೃಷಿ ಮತ್ತು ವ್ಯವಹಾರ ಹಾಗೂ ರಾಜಕಾರಣಿಯಾಗಿ ಪ್ರಸ್ತುತ ಕೆಪಿಸಿಸಿ ಸದಸ್ಯರಾಗಿ ಅನುಭವ ಹೊಂದಿರುವ ಶಾಸಕ ಚನ್ನಾರೆಡ್ಡಿ ಪಾಟೀಲ್ ಅವರು (1987 ರಿಂದ 1992 ರ ವರೆಗೆ ಕಲಬುರಗಿ ಜಿಲ್ಲಾ ಪರಿಷತ್ ಸದಸ್ಯರಾಗಿ, (1998 ರಿಂದ 2004 ) ಕಲಬುರಗಿ ಎಂಎಲ್ಸಿ ಆಗಿ ಸೇವೆ ಸಲ್ಲಿಸಿ ಹಾಗೂ ಯಾದಗಿರಿ ಹಾಗೂ ಶಹಾಪುರ ಎಪಿಎಂಸಿ ನಿರ್ದೇಶಕರಾಗಿ, ಮತ್ತು ಯಾದಗಿರಿ ಗಂಜ್ ಅಸೋಸಿಯೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಮೇಲಾಗಿ ಈ ಭಾಗದ ಜನನಾಯಕ, ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಪ್ಪಟ ಅನುಯಾಯಿಯಾಗಿರುವ ಅವರು ರಾಷ್ಟೀಯ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೊಂದು ಪಕ್ಷಕ್ಕೆ ಸೆರದೇ ಒಂದೇ ಪಕ್ಷಕ್ಕೆ ದುಡಿದ ಜನನಾಯಕರಾಗಿದ್ದಾರೆ.
ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ನೀಡಿ ನಮ್ಮ ಹಿಂದುಳಿದ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದ್ದು, ಆದ ಕಾರಣ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















