ಲೈವ್ ಟಿವಿ ನ್ಯೂಸ್

ದಿನಾಂಕ : 16-08-2025

*ಹುಲ್ಕಲ್ (ಜೆ ) ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವದ ಸಂಭ್ರಮ*

ವರದಿಗಾರರು : ರಾಜಶೇಖರ ಮಾಲಿ ಪಾಟೀಲ್
ವರದಿ ಸ್ಥಳ :ಶಹಾಪುರ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 67+

*ಯಾದಗಿರಿ, ಆಗಸ್ಟ್ 15* ವಡಗೇರಾ ತಾಲ್ಲೂಕಿನ ಹುಲ್ಕಲ್ ಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ 79ನೇ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಕವಿ-ಕಲಾವಿದ, ಅಭಿಯಂತರರಾದ ದೇವಿಂದ್ರ ಹುಲ್ಕಲ್, ಸ್ವಾತಂತ್ರ ಎಂಬುದು ಅದೊಂದು ದೊಡ್ಡ ಶಕ್ತಿ, ನಿಜಕ್ಕೂ ಕೂಡ ಇಂದಿನ ಹಳ್ಳಿಗಳಿಗೆ ಯಾವುದೇ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳಬಹುದು ಯಾಕಂದರೆ, 79 ವರ್ಷಗಳು ಕಳೆದರೂ ಸಹ ಕೆಲವು ಹಳ್ಳಿಗಳಿಗೆ ಸಾರಿಗೆ, ವಿದ್ಯುತ್, ವಸತಿ, ಶಿಕ್ಷಣದಂತಹ ಮೂಲಭೂತ ಸೌಕರ್ಯಗಳಿಲ್ಲ ಎಂದಾಗ ಅದು ಹೇಗೆ ಸ್ವಾತಂತ್ರ ವೆನಿಸುತ್ತೆ ಎಂದರು ಮುಂದುವರಿದು ಮಾತನಾಡಿ ನಮ್ಮೂರಿನ ಶಾಲೆಯ ಮಕ್ಕಳು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಮಾಡೋದು ನೋಡಿ ನಿಜಕ್ಕೂ ಮಕ್ಕಳು ಮತ್ತು ಶಿಕ್ಷಕರ ಶ್ರಮದ ಕುರಿತು ಹೆಮ್ಮೆ ಭಾವ ಮೂಡಿತು, ಎಂಥಹ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆಯುವಷ್ಟು ಮಕ್ಕಳು ಪ್ರತಿಭಾವಂತರಾಗಿದ್ದಾರೆ. ಬಡ ಮತ್ತು ನಿರ್ಗತಿಕರ ಮಕ್ಕಳು ಶೈಕ್ಷಣಿಕ ಭವಿಷ್ಯಕ್ಕಾಗಿ ಸ್ಪರ್ಶ ಸಂಸ್ಥೆ ಕಟ್ಟಿ ಸುಮಾರು 8 ರಿಂದ 9 ಸಾವಿರಕ್ಕೂ ಅಧಿಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಅವರ ಬದುಕಲ್ಲಿ ಭರವಸೆ ಮೂಡಿಸಿದ ಗೋಪಿನಾಥ್ ಆರ್ ಅವರ ಸಾಧನೆಯ ಕಥೆಯನ್ನು ಮಕ್ಕಳಿಗೆ ಸ್ಫೂರ್ತಿಯಾಗಲೆಂದು ಹೇಳಿ ಮುದ್ದು ಮಕ್ಕಳ ಮುಂದಿನ ಶೈಕ್ಷಣಿಕ ಉಜ್ವಲ ಭವಿಷ್ಯಕ್ಕೆ ಶುಭಕಾಮನೆ ತಿಳಿಸಿದರು.

ಇನ್ನೊರ್ವ ಅಥಿತಿ ಸಿ.ಆರ್.ಪಿ ರಮೇಶ್ ನಿರೋಣಿ ಮಾತನಾಡಿ ಹುಲ್ಕಲ್( ಜೆ)ಶಾಲೆಯಲ್ಲಿ ಮಕ್ಕಳೊಂದಿಗೆ ಮಕ್ಕಳಂತೆ ಆಟವಾಡಿ ಹೋಗುವಷ್ಟು ಚೆಂದದ ಭೌತಿಕ ಮತ್ತು ಶೈಕ್ಷಣಿಕ ವಾತಾವರಣವಿದೆ, ಪೋಷಕರು ಮಕ್ಕಳಿಗೆ ನಿರಂತರವಾಗಿ ಶಾಲೆಗೆ ಕಳುಹಿಸಬೇಕು ಶಾಲೆ ಬಿಡಿಸೋದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ಈ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರು ಉಪಾಧ್ಯಕ್ಷರು, ಸದ್ಯಸರು ಹಾಗೂ ಊರಿನ ಮುಖಂಡರು ಮತ್ತು ಶಿಕ್ಷಣ ಪ್ರೇಮಿಗಳು ಸಹಾಯ ಸಹಕಾರವಿದೆ ಇದು ಸದಾ ಹೀಗೆ ಇರಲೆಂದು ಕೇಳಿಕೊಂಡರು. ಶಾಲೆಯ ಮಕ್ಕಳಾದ ಐಶ್ವರ್ಯ, ಅಮೃತ, ಭಾವನಾ, ನಾಗವೇಣಿ, ಪ್ರಕಾಶ, ನಿಕಿತಾ, ರೇಣುಕಮ್ಮ, ಹಾಗೂ ಸುಮಯ ಭಾಷಣ ಕಣ್ಮನ ಸೆಳೆದವು. ಶಾಲೆಯ ಸಹ ಶಿಕ್ಷಕರಾದ ರಮೇಶ ಮಾತನಾಡಿ ಸ್ವಾತಂತ್ರ ಪೂರ್ವದ ಭಾರತದ ಇತಿಹಾಸ ಹಾಗೂ ಭಾರತದ ಶ್ರೀಮಂತಿಕೆ ಕುರಿತು ಮಾತನಾಡಿದರು. ಎಸ್.ಡಿ.ಎಂ. ಸಿ. ಉಪಾಧ್ಯಕ್ಷರಾದ ನಾಗಪ್ಪ ನಾಟೇಕಾರ್ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರು ಇನ್ನೂ ಹೆಚ್ಚಿನ ಶ್ರವಹಿಸಲಿ ಅದಕ್ಕೆ ನಮ್ಮ ಸಹಾಯ ಸಹಕಾರ ಸದಾ ಇರುತ್ತೆ ಎಂದರು, ಸದಸ್ಯರಾದ ಏಸುಮಿತ್ರ ಹಾಗೂ ಊರಿನ ಯುವಕ ಬಂದಯ್ಯ ನಾಟೇಕಾರ್ ಇನ್ನಿತರರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಹೇಮಾ ಮತ್ತು ಮಸ್ಕಾನ್ ಸಂಗಡಿಗರ ದೇಶಭಕ್ತಿ ಗೀತೆ ಸುಂದರವಾಗಿತ್ತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಸಹ ಶಿಕ್ಷಕಿ ಶ್ರೀಮತಿ ಬಸಲಿಂಗಮ್ಮ ನೆರವೇರಿಸಿದರು, ಸಹ ಶಿಕ್ಷಕರಾದ ಮಲ್ಲಿಕಾರ್ಜುನ ಸ್ವಾಗತಿಸಿದರು, ಹಿಂದಿ ಭಾಷಾ ಶಿಕ್ಷಕ ಮಕ್ತುಮರವರು ವಂದಿಸಿದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand