ಲೈವ್ ಟಿವಿ ನ್ಯೂಸ್

ದಿನಾಂಕ : 16-06-2025

*ನಿರುದ್ಯೋಗಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ನಡೆಸಲು ತರಬೇತಿ ಕಾರ್ಯಕ್ರಮ ಬಹುಮುಖ್ಯ: ಪೌರಾಯುಕ್ತ ಜೀವನ ಕಟ್ಟಿ

ವರದಿಗಾರರು : ರಾಜಶೇಖರ ಮಾಲಿ ಪಾಟೀಲ್
ವರದಿ ಸ್ಥಳ :ಶಹಾಪುರ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 167+

*ಶಹಾಪುರ, ಜೂ 16* ರಾಜ್ಯ ಸರಕಾರ ಮಹಿಳೆಯರ ಸ್ವಾವಲಂಬಿ ಬದುಕು ನಡೆಸಲು ಇಂತ ತರಬೇತಿ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿವೆ, ಇಂತಹ ತರಬೇತಿಯಲ್ಲಿ ಪರಿಪೂರ್ಣ ವಾಗಿ ಭಾಗವಹಿಸಿದಾಗ ನೈಪುಣ್ಯತೆ ಸಿಗುತ್ತದೆ ಎಂದು ಪೌರಾಯುಕ್ತರಾದ ಜೀವನ ಕಟ್ಟಿಮನಿ ಅವರು ಅಭಿಪ್ರಾಯಪಟ್ಟರು.

ನಗರ ಸಭೆ ಶಹಾಪುರ ಹಾಗು ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಭಿವೃದ್ಧಿ ಸಂಸ್ಥೆ (ರಿ) ರವರ ಸಂಯುಕ್ತಾಶ್ರಯದಲ್ಲಿ 2024-25ನೇ ಸಾಲಿನ ಎಸ್. ಎಫ್. ಸಿ. ಮುಕ್ತ ನಿಧಿ ಅನುದಾನಡದಿಯಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಹೊಲಿಗೆ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ನಿರುಣಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ನಗರ ಸಭೆಯ ಅಭಿಯಾನ ವ್ಯವಸ್ಥಾಪಕರಾದ ಶ್ರೀ ಗುರು ತಳವಾರ ಮಾತನಾಡಿ ತರಬೇತಿ ಕಲಿತು ಸಮಯ ವ್ಯರ್ಥ ಮಾಡದೆ ಸ್ವಯಂ ಉದ್ಯೋಗ ಮಾಡಲು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ನಗರ ಸಭೆಯ ಅಧಿಕಾರಿಯಾದ ಶರಣಬಸವ ಶೆಟ್ಟಿಕೇರಾ, ಮಾಸ್ಟರ್ ಟ್ರೈನರ್ ಆದ ಉಮಾ ಹಿರೇಮಠ, ಸುಮಿತ್ರಾ ಮತ್ತು ತರಬೇತಿದಾರರು ಭಾಗವಹಿಸಿದ್ದರು ಈ ಕಾರ್ಯಕ್ರಮ ಮಲ್ಲಿಕಾರ್ಜುನ್ ಸ್ವಾಗತಿಸಿ, ಭೀಮಾಶಂಕರ್ ಬೆನಕನಹಳ್ಳಿ ನಿರೂಪಿಸಿ ವಂದಿಸಿದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand