ಲೈವ್ ಟಿವಿ ನ್ಯೂಸ್

ದಿನಾಂಕ : 08-08-2025

ಡೋಣಿ ನದಿಗೆ ಪ್ರವಾಹ – ತಾಳಿಕೋಟಿ ಪ್ರಮುಖ ರಸ್ತೆಗಳ ಸಂಚಾರ ಸಂಪೂರ್ಣ ಸ್ಥಗಿತ

ವರದಿಗಾರರು : ಸಂಗನಗೌಡ ಎಚ್ ಗಬಸಾವಳಗಿ
ವರದಿ ಸ್ಥಳ :ತಾಳಿಕೋಟಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 94+

ಡೋಣಿ ನದಿಗೆ ಪ್ರವಾಹ – ತಾಳಿಕೋಟಿ ಪ್ರಮುಖ ರಸ್ತೆಗಳ ಸಂಚಾರ ಸಂಪೂರ್ಣ ಸ್ಥಗಿತ ತಾಳಿಕೋಟಿ, ಆ. 8: ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಡೋಣಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಪ್ರವಾಹ ಉಂಟಾಗಿದೆ. ಇದರ ಪರಿಣಾಮವಾಗಿ ತಾಳಿಕೋಟಿಯಿಂದ ಮುದ್ದೇಬಿಹಾಳ ಹಾಗೂ ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ಮಾರ್ಗಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಳಿಕೋಟಿ–ವಿಜಯಪುರ ಮಾರ್ಗದ ಮುಖ್ಯ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಇತ್ತೀಚೆಗೆ ಕೆಳ ಸೇತುವೆ ಸಂಚಾರಕ್ಕೆ ಬಳಸಲಾಗುತ್ತಿತ್ತು. ಆದರೆ ಅದು ಜಲಾವೃತಗೊಂಡ ಹಿನ್ನೆಲೆ, ಮೂಕಿಹಾಳ ಗ್ರಾಮದ ಹತ್ತಿರದ ಸೋಗ್ಲಿ ಹಳ್ಳ ಸೇತುವೆಯ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇವತ್ತು ಆ ಸೇತುವೆಯೂ ಪ್ರವಾಹ ನೀರಿನಲ್ಲಿ ಮುಳುಗಿರುವುದರಿಂದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರವಾಹದಿಂದಾಗಿ ಬಾಡಿಹಾಳ ಮತ್ತು ಬೊಮ್ಮನಹಳ್ಳಿ ಗ್ರಾಮಗಳಲ್ಲಿಯೂ ಡೋಣಿ ನದಿಯ ಹಿನ್ನೀರು ನುಗ್ಗಿ, ಕೃಷಿಭೂಮಿಗಳಲ್ಲಿ ನಿಂತ ಬೆಳೆ ಹಾನಿಯಾಗುವ ಭೀತಿ ಉಂಟಾಗಿದೆ. ರೈತರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಲು ತಾಳಿಕೋಟಿ ತಹಸೀಲ್ದಾರ್ ಡಾ. ವಿನಯಾ ಹೂಗಾರ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪ್ರವಾಹದ ಸ್ಥಿತಿ ಹಾಗೂ ನೀರಿನ ಮಟ್ಟದ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand