
ಲೈವ್ ಟಿವಿ ನ್ಯೂಸ್

ದಿನಾಂಕ : 14-09-2025
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಆಂಜನೇಯ ದೇವಸ್ಥಾನ ಸುತ್ತ ಭಂಡಾರದ ಮಳೆ
ವರದಿಗಾರರು : ಹೆಚ್ ಎಂ ಹವಾಲ್ದಾರ್
ವರದಿ ಸ್ಥಳ :ಬಾಗಲಕೋಟೆ
ಒಟ್ಟು ಓದುಗರ ಸಂಖ್ಯೆ : 3+
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಹೆಗ್ಗೂರು, ನಿನ್ನೆ ಸಂಜೆ ೫ ಕ್ಕೆ ಸುರಿದ ಮಳೆ, ಮಳೆ ಹನಿಗಳು ಹಳದಿ ಬಣ್ಣದಿಂದ ಕೂಡಿವೆ. ಹೆಗ್ಗೂರು ಆಂಜನೇಯ ದೇವಸ್ಥಾನ ಸುತ್ತ ಭಂಡಾರದ ಮಳೆ. ದೇವಸ್ಥಾನದ ಸುತ್ತ ಮಳೆ ಹನಿ ರೀತಿಯ ಹಳದಿ ಕಲೆಗಳು. ಹಳದಿ ಕಲೆಗಳನ್ನು ತಿಕ್ಕಿ ಭಂಡಾರದ ಎಂದು ಹಣೆಗೆ ಲೇಪನ. ಭಂಡಾರದ ರೀತಿ ಹಣೆಗೆ ಹಚ್ಚಿಕೊಳ್ತಿರುವ ಜನರು. ಇದು ಭಂಡಾರದ ಮಳೆ ಎಂದು ಭಕ್ತರ ನಂಬಿಕೆ. ದೇವಸ್ಥಾನದ ಸುತ್ತ ಹಳದಿ ಕಲೆಗಳು.
ಮಳೆ ಹನಿಯ ಹಳದಿ ಕಲೆಗಳ ಕಂಡು ಜನರಲ್ಲಿ ಅಚ್ಚರಿ. ಇದು ಒಳ್ಳೆಯದಕ್ಕೋ ಕೆಟ್ಟದಕ್ಕೋ ಗೊತ್ತಿಲ್ಲ. ಯಾವ ಕಾರಣ ಗೊತ್ತಿಲ್ಲ ಆದರೆ ಮಳೆ ಹನಿಗಳು ಭಂಡಾರದ ಬಣ್ಣದಿಂದ ಕೂಡಿವೆ. ಹಿಂದೆ ಎಂದೂ ಈ ರೀತಿ ಆಗಿಲ್ಲ. ದೇವಸ್ಥಾನದ ಸುತ್ತ ಹದಿನೈದು ಅಡಿ ವ್ಯಾಪ್ತಿ ಈ ತರಹ ಹಳದಿ ಕಲೆಗಳು ಕಾಣಿಸಿಕೊಂಡಿವೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ ಅಂತಿರುವ ಜನರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















