
ಲೈವ್ ಟಿವಿ ನ್ಯೂಸ್

ದಿನಾಂಕ : 07-09-2025
ಜಾತಿ ಮೀಸಲಾತಿಗಾಗಿ ಮುಖ್ಯಮಂತ್ರಿಗಳಿಗೆ ಮನವಿ
ವರದಿಗಾರರು : ದರ್ಶನ್ ಎಂ ಎನ್
ವರದಿ ಸ್ಥಳ :ದಾವಣಗೆರೆ
ಒಟ್ಟು ಓದುಗರ ಸಂಖ್ಯೆ : 27+
ದಾವಣಗೆರೆ ಜಿಲ್ಲಾ ಬಂಜಾರ ಮೀಸಲಾತಿ ಹೋರಾಟ ಸಮಿತಿ. ನ್ಯಾಯಮೋಹನದಾಸ್ ಆಯೋಗ ವರದಿ ಸುಪ್ರೀಂಕೋರ್ಟ್ ನಿರ್ದೇಶನ ಮಾನದಂಡದಲ್ಲಿ ತಯಾರಾದ ಕಾರಣ ವರದಿಯನ್ನು ಕೂಡಲೇ ತಿರಸ್ಕರಿಸಲು ಮನವಿ. ಮಾನ್ಯ ಜಿಲ್ಲಾ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ.
ದಾವಣಗೆರೆ ಜಿಲ್ಲಾ ಬಂಜಾರ ಮೀಸಲಾತಿ ಹೋರಾಟ ಸಮಿತಿ. ನ್ಯಾಯಮೋಹನದಾಸ್ ಆಯೋಗ ವರದಿ ಸುಪ್ರೀಂಕೋರ್ಟ್ ನಿರ್ದೇಶನ ಮಾನದಂಡದಲ್ಲಿ ತಯಾರಾದ ಕಾರಣ ವರದಿಯನ್ನು ಕೂಡಲೇ ತಿರಸ್ಕರಿಸಲು ಮನವಿ. ಮಾನ್ಯ ಜಿಲ್ಲಾ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ.
ಕರ್ನಾಟಕ ರಾಜ್ಯ ಸರ್ಕಾರ ಒಳ ಮೀಸಲಾತಿ ಅಂಗೀಕರಣದಲ್ಲಿ ನಮ್ಮ ಬಂಜಾರ ಸಮುದಾಯದ ಸಂವಿಧಾನಿಕ ಮೀಸಲಾತಿಯನ್ನು ಕಿತ್ತುಕೊಳ್ಳುವ ಅಥವಾ ಕಡಿಮೆಗೊಳಿಸುವ ಯಾವುದೇ ಪ್ರಯತ್ನಗಳನ್ನು ಬಂಜಾರ ಸಮಾಜವು ಒಪ್ಪುವುದಿಲ್ಲ. ನಮ್ಮ ಸಮುದಾಯ ವಿರೋಧದ ನಡುವೆ ಮೀಸಲಾತಿಗೆ ಕೈ ಹಾಕಿದ್ದ ಬಿಜೆಪಿ ಕಳೆದ ಬಾರಿ ಅಧಿಕಾರ ಕಳೆದುಕೊಂಡಿರುವುದು ತಿಳಿದಿರುವ ಸಂಗತಿ. ರಾಜ್ಯ ಸರ್ಕಾರ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸುತ್ತೇವೆ .ನೂರೊಂದು ಪರಿಶಿಷ್ಟ ಜಾತಿಗಳ ಪೈಕಿ ಶೇಕಡ 85% ರಷ್ಟು ಸಮುದಾಯಗಳಿಗೆ ಅನ್ಯಾಯವಾಗಿರುವ ಶಿಫಾರಸುಗಳನ್ನು ಒಳಗೊಂಡಿರುವ ನ್ಯಾಯಮೋಹನ್ ದಾಸ್ ಆಯೋಗ ವರದಿಯನ್ನು ಕೂಡಲೇ ತಿರಸ್ಕರಿಸಬೇಕು ಹಾಗೂ ನಮ್ಮ ಮುಂದಿನ ಹಕ್ಕೋತ್ತಾಯಗಳನ್ನು ಕೂಡಲೇ ಗಮನಿಸಿ ಅದರಂತೆ ಮುಂದಿನ ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಹೋರಾಟ ನಡೆಸಿರುವುದು..
ಬಂಜಾರ ಭೋವಿ ಕೊರಚ ಕೊರಮ ಸಮುದಾಯದ ನಾಲ್ಕು ಜಾತಿಗಳಿಗೆ ಶೇಕಡ ಐದು ಪರ್ಸೆಂಟ್ ನೀಡಿ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕಾಗಿತ್ತು. ಆದರೆ ನಾಲ್ಕು ಜಾತಿ, 59ಉಪ ಜಾತಿ ಸೇರಿ 63 ಜಾತಿಗಳನ್ನು ಒಟ್ಟುಗೂಡಿಸಿ 5% ಮಾಡಿರುವುದು ಗೋರಾ ಅನ್ಯಾಯವಾಗಿದೆ, ತಾವು 63 ಜಾತಿಗಳನ್ನು ಸೇರಿಸಲೇಬೇಕೆಂದರೆ ಬಂಜಾರ ಭೋವಿ ಕೊರಚಾ ಕೊರಮಕ್ಕೆ 6%ಉಳಿದ 59 ಜಾತಿಗೆ 1% ಮಾಡಿ ಒಟ್ಟು 7% ನಿಗದಿ ಮಾಡಿದ್ದಾರೆ ಸಾಮಾಜಿಕ ನ್ಯಾಯ ದೊರಕಿಸಿದಂತಾಗುತ್ತಿತ್ತು ಇದರಲ್ಲಿ ವರದಿಯು ಎಡವಿದ್ದರಿಂದ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಹೋರಾಟ ನಡೆಸಿ ನಡೆಸಿದ್ದರು
ಇದಕ್ಕೆ ಸಾಕ್ಷಿಯಾದ 1) ಬಸವರಾಜ್ ನಾಯಕ ಮಾಜಿ ಶಾಸಕರು 2) ಶಿವಪ್ರಕಾಶ್ ಮಹಾನಗರ ಪಾಲಿಕೆ ಸದಸ್ಯರು 3) ಮಂಜು ನಾಯ್ಕ ಪಾಲಿಕೆ ಸದಸ್ಯರು 4) ಅನಿಲ್ ನಾಯ್ಕ ಪ್ರಧಾನ ಕಾರ್ಯದರ್ಶಿ 5) ಹನುಮಂತ ನಾಯ್ಕ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















