
ಲೈವ್ ಟಿವಿ ನ್ಯೂಸ್

ದಿನಾಂಕ : 11-09-2025
*ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ ಅವರ ಕಾಳಜಿಯಿಂದ ಹೊಸ ಬದುಕಿಗೆ ಕಾಲಿಟ್ಟ ಮಾನಸಿಕ ಅಸ್ವಸ್ಥೆ*
ವರದಿಗಾರರು : ರಾಜಶೇಖರ ಮಾಲಿ ಪಾಟೀಲ್
ವರದಿ ಸ್ಥಳ :ಶಹಾಪುರ
ಒಟ್ಟು ಓದುಗರ ಸಂಖ್ಯೆ : 92+
*ಕೂದಲು ಕತ್ತರಿಸಿ, ಸ್ನಾನ ಮಾಡಿಸಿ ಒಳ್ಳೆಯ ಬಟ್ಟೆಯನ್ನು ತೊಡಿಸಿ ಹೊಸ ಬದುಕಿಗೆ ಕಾಲಿಡುವಂತೆ ಮಾಡಿದ ಭಾರತಾಂಬೆ ಶಿಕ್ಷಣ ಸಂಸ್ಥೆ*
*ಯಾದಗಿರಿ: ಸೆ 11* ನಗರದಲ್ಲಿ ಮಳೆ ಚಳಿ ಎನ್ನದೇ ಅರೆ ಹುಚ್ಚರಂತೆ ಅಲೆಯುತ್ತಿದ್ದ ನಿರ್ಗತಿಕ ಮಾನಸಿಕ ಅಸ್ವಸ್ಥೆ ಮಹಿಳೆಯು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ ಅವರ ಕಾಳಜಿಯಿಂದ ಹೊಸ ಬದುಕಿಗೆ ಕಾಲಿಟ್ಟಿದ್ದಾಳೆ.
ನಿರ್ಗತಿಕ ಮಹಿಳೆಯು ನಗರದಲ್ಲಿ ಬೀದಿ ಬದಿಯಲ್ಲಿ ಅಲೆಯುತ್ತಿರುವುದು ನಗರಸಭೆ ಅಧ್ಯಕ್ಷೆ ಅವರ ಗಮನಕ್ಕೆ ಸಾರ್ವಜನಿಕರು ತಂದಿದ್ದಾರೆ. ತಕ್ಷಣವೇ ಸ್ಪಂದಿಸಿದ ಅವರು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್, ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ಕೆ ವೈದ್ಯ ಮತ್ತು ಸಿಆರ್ಪಿ ಗಳ ತಂಡವನ್ನು ಕರೆದು ಅಸ್ವಸ್ಥ ಮಹಿಳೆ ಇರುವ ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಆ ಮಹಿಳೆಯನ್ನು ಹಾರೈಕೆ ಕೇಂದ್ರಕ್ಕೆ ಸೇರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸೂಚಿಸಿದರು.
ಮಹಿಳೆಯನ್ನು ಅಧ್ಯಕ್ಷೆ ಅವರ ಆದೇಶದ ಮೇರೆಗೆ ನಗರದಲ್ಲಿನ ವಸತಿ ರಹಿತರ ಆಶ್ರಯ ಕೇಂದ್ರದ ಅಧೀನಕ್ಕೆ ಒಪ್ಪಿಸಿದರು.
*ದಯನೀಯ ಸ್ಥಿತಿಯಲ್ಲಿ ಖಿನ್ನತೆಗೆ ಒಳಗಾದಂತೆ ಇರುವ ಮಹಿಳೆಯ ಮಾಸಿದ ಹರಕಲು ಬಟ್ಟೆ, ಗಂಟು ಕಟ್ಟಿದ ತಲೆ ಕೂದಲು ನೋಡಿದರೆ ಆಕೆಯನ್ನು ಮುಟ್ಟದ ಸ್ಥಿತಿಯಲ್ಲಿ ಇದ್ದರು. ವಸತಿ ರಹಿತರ ಆಶ್ರಯ ಕೇಂದ್ರವನ್ನು ನಿರ್ವಹಣೆ ಮಾಡುತ್ತಿರುವ ಭಾರತಾಂತೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ದೊಡ್ಡಮನಿ ಮತ್ತು ವ್ಯವಸ್ಥಾಪಕ ಬೀರಲಿಂಗಪ್ಪ ಕಿಲ್ಲನಕೇರಾ ಮತ್ತು ಕೇರ್ ಟೇಕರ್ ದೇವಮ್ಮ ಹಾಗೂ ಸಿಬ್ಬಂದಿ ವರ್ಗದವರು ಆಕೆಯ ತಲೆ ಕೂದಲು ಕತ್ತರಿಸಿ, ಸ್ನಾನ ಮಾಡಿಸಿ ಒಳ್ಳೆಯ ಬಟ್ಟೆಯನ್ನು ತೊಡಿಸಿದ್ದಾರೆ.ಸಾಮಾನ್ಯ ಜನರಂತೆ ಹೊಸ ಬದುಕಿಗೆ ಕಾಲಿಡುವಂತೆ ಮಾಡಿದ್ದಾರೆ.*
ಮುಗ್ದ ಮನಸಿನ ಮಹಿಳೆ ಆರೈಕೆರಯಿಲ್ಲದೆ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಳು. ಈಕೆಯು ಮಾನಸಿಕ ಅಸ್ವಸ್ಥತೆ ಮಾತ್ರವಲ್ಲದೆ ದೈಹಿಕವಾಗಿ ನಾನಾ ಕಾಯಿಲೆಗಳಿಂದಲೂ ಪರದಾಡಿ ಯಾವುದೇ ಅನ್ಯ ಮಾರ್ಗವಿಲ್ಲದೆ ಅಸಹಾಯಕರಾಗಿ ಅನಿವಾರ್ಯವೆಂಬಂತೆ ಹಿಂಸೆಯನ್ನು ಅನುಭವಿಸುತ್ತಲೇ ದಿನ ಕಳೆಯುತ್ತಿದ್ದಳು ಇಂದು ಆ ಸಂಕಷ್ಟದಿಂದ ಮುಕ್ತಿ ಹೊಂದಿದ್ದಾಳೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















