
ಲೈವ್ ಟಿವಿ ನ್ಯೂಸ್

ದಿನಾಂಕ : 15-09-2025
ಕೆಡಿಪಿ ಸಭೆಯಲ್ಲಿ ಮೊಬೈಲ್ ನಲ್ಲೆ ಬಿಜಿಯಾದ ಅಧಿಕಾರಿಗಳು
ವರದಿಗಾರರು : ಬಸವರಾಜ ಪೂಜಾರಿ
ವರದಿ ಸ್ಥಳ :ಬೀದರ
ಒಟ್ಟು ಓದುಗರ ಸಂಖ್ಯೆ : 13+
ಪ್ರತಿ ಪಕ್ಷಗಳ ಶಾಸಕರಿಗೆ ನಿರ್ಲಕ್ಷ್ಯ ತೋರುತಿರುವ ಅಧಿಕಾರಿಗಳ ಕಂಪ್ಲೀಟ್ ಸ್ಟೋರಿ ಬೀದರ ಜಿಲ್ಲೆ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶಾಸಕ ಪ್ರಭು ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾಜಿ ಸಚಿವರು ಔರಾದ ಕ್ಷೇತ್ರದಶಾಸಕ ಪ್ರಭು ಚವ್ಹಾಣ ಅವರು ಔರಾದ್ ವಿಧಾನಸಭೆ ಕ್ಷೇತ್ರದಲ್ಲಿ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚೆ ಮಾಡುವಾಗ ಕೆಲವೊಂದು ಅಧಿಕಾರಿಗಳು ನಮಗೂ ಈ ಸಭೆಗೂ ಸಂಬಂಧವೇ ಇಲ್ಲ ಎಂಬಂತೆ ಕೈಯಲ್ಲಿದ್ದ ಮೊಬೈಲ್ ನಲ್ಲಿ ರೀಲ್ಸ್ ನೋಡಿದ್ರೆ ಮತ್ತೆ ಕೆಲವರುವಾಟ್ಸಾಪ್ಪ್ ನೋಡುತ್ತಾ ಕುಳಿತ್ತಿದರು. ತನ್ನ ಮೇಜಿನ ಕೆಳಗೆ ಮೊಬೈಲ್ ಇಟ್ಟು ಮನಸ್ಸಿಗೆ ಬಂದಂತೆ ಮನರಂಜನೆಯಲ್ಲಿ ತೊಡಗಿದ್ದರು. ಇನ್ನೂ ಕೆಲವರಂತೂ ಸಭೆಯ ನಡುವೆಯೆ ಮೊಬೈಲ್ ನಲ್ಲಿ ಸಂಭಾಷಣೆ ಮಾಡುತ್ತಲೆ ಇದ್ದಿದ್ದು ಕಂಡು ಬಂತು.
ಆದರೆ ಶಾಸಕರು ತಮ್ಮ ಕ್ಷೇತ್ರದಲ್ಲಿ ಅತಿವೃಷ್ಟಿ ಯಿಂದ ಕ್ಷೇತ್ರದ ವ್ಯಾಪ್ತಿಯಲ್ಲಿನ ರೈತರ ಬೆಳೆಗಳನ್ನು ಹಾನಿಯಾದ ಬಗ್ಗೆ ಅಧಿಕಾರಿಗಳು ಮಾಡಿರುವ ವರದಿಯನ್ನು ನೋಡಿ ಕೃಷಿ ಅಧಿಕಾರಿಗಳನ್ನು ತರಾಟೆಗೆ ತಗೆದು ಕೊಂಡು ಗಂಭೀರ ವಾಗಿ ಚರ್ಚೆ ನಡೆಸುತಿದ್ದರು, ಆದರೆ ಮಾಜಿ ಸಚಿವರು ಹಾಗೂ ವಿರೋಧ ಪಕ್ಷದ ಶಾಸಕರಾದ ಪ್ರಭು ಚವ್ಹಾಣ ಅವರ ಮಾತಿಗೆ ಯಾವುದೇ ಸ್ಪಂದಿಸದೆ ನಮಗೂ ಇದಕ್ಕೂ ಯಾವುದೇ ಸಂಭಂದ ಇಲ್ಲ ಎಂಬಂತೆ ತಮ್ಮ ತಮ್ಮ ಮೊಬೈಲ್ ಗಳಲ್ಲಿ ಚಾಟ್ ಮಾಡುತಿರುವುದು ಇದನ್ನೆಲ್ಲ ನೋಡುತ್ತಿದ್ದರೆ ಅಧಿಕಾರಿಗಳು ತಮಗೆ ವಹಿಸಿದ ಮಳೆಯಿಂದಾದ ರೈತರ ಬೆಳಗಳ ಸಮೀಕ್ಷೆ ನಿಖರತೆಯ ಬಗ್ಗೆ ಯೊಚಿಸುವಂತಾಗಿದೆ ಎಂದು ಹೇಳಬಹುದು. ರಾಜ್ಯ ಸರ್ಕಾರವು ಕೂಡಲೆ ಎಚ್ಚರ ವಹಿಸಿ ರಾಜ್ಯದ ಇಂತಹ ಅಧಿಕಾರಿಗಳ ವಿರುದ್ಧ ಕೂಡಲೆ ಕ್ರಮಕೈಗೊಂಡು ರಾಜ್ಯದಲ್ಲಿ ಆದ ಭಾರಿಪ್ರಮಾಣದ ಮಳೆಯಿಂದ ತಮ್ಮ ಬೆಳೆಗಳನ್ನು ಕಳೆದು ಕೊಂಡು ಕಂಗಾಲದ ರೈತ ಬೆಳೆ ಹಾನಿಯ ಬಗ್ಗೆ ಸ್ವ ಪಕ್ಷ ಪ್ರತಿಪಕ್ಷದ ಶಾಸಕರ ಕ್ಷೇತ್ರ ಎನ್ನುವ ಭೆದವಿಲ್ಲದೆ ಅಧಿಕಾರಿಗಳು ನಿಖರವಾದ ಸಮೀಕ್ಷೆ ಮಾಡಿ ರಾಜ್ಯದ ಎಲ್ಲಾ ರೈತರಿಗೆ ನ್ಯಾಯಯುತ ವಾದ ಪರಿಹಾರ ಒದಗಿಸುವರೋ ಅಥವಾ ತಮ್ಮ ರಾಜಕೀಯ ಕಾರಣಕ್ಕೆ ವಿರೋಧ ಪಕ್ಷದ ಶಾಸಕರ ಕ್ಷೇತ್ರದಲ್ಲಿನ ರೈತರಿಗೆ ಅನ್ಯಾ ಮಾಡುತಾರೋ ಕಾದು ನೋಡಬೇಕು
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















