
ಲೈವ್ ಟಿವಿ ನ್ಯೂಸ್

ದಿನಾಂಕ : 03-09-2025
ಪೊಲೀಸ್ ದಾಳಿ: ಅಂಗಡಿಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ನಿಷೇಧಿತ ವಸ್ತುಗಳ ವಶ
ವರದಿಗಾರರು : ಹರೀಶ್ ಜೋಗಿ
ವರದಿ ಸ್ಥಳ :ಯಲ್ಲಾಪುರ
ಒಟ್ಟು ಓದುಗರ ಸಂಖ್ಯೆ : 32+
ಯಾವುದೇ ಪರವಾನಿಗೆ ಇಲ್ಲದೇ ನಿಷೇಧಿತ ವಸ್ತುಗಳಾದ ಇಲೆಕ್ಟ್ರಾನಿಕ್ ಸಿಗರೇಟ್ ಗಳನ್ನು ಹಾಗೂ ಇವುಗಳಿಗೆ ತುಂಬುವ ನಿಕೋಟಿನ್ ಲಿಕ್ವಿಡ್ ರಿಫಿಲ್ ಗಳನ್ನು ಇಟ್ಟುಕೊಂಡಿದ್ದ ಅಂಗಡಿಯ ಮೇಲೆ ಪೊಲೀಸರು ದಾಳಿನಡೆಸಿ ಇವುಗಳನ್ನು ವಶಪಡಿಸಿಕೊಂಡು, ಇವುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ.
ಭಟ್ಕಳದ ಹೂವಿನ ಚೌಕ ಟೌನ್ ಸೆಂಟರ್ ನಲ್ಲಿರುವ ತನ್ನ ಅಂಗಡಿಯಲ್ಲಿ ಆರೋಪಿ ಮಕ್ಸುಲ್ ತಂದೆ ಇಸ್ಮಾಯಿಲ್ ತಂದೆ ಮಡಿಕಲ್ ಎಂಬಾತನು ಒಟ್ಟೂ 2,39,000 ರೂ ಮೌಲ್ಯದ ನಿಷೇಧಿತ ವಸ್ತುಗಳಾದ 51 ಇಲೆಕ್ಟ್ರಾನಿಕ್ ಸಿಗರೇಟ್ ಗಳನ್ನು ಹಾಗೂ 154 ನಿಕೋಟಿನ್ ಲಿಕ್ವಿಡ್ ರಿಫಿಲ್ ಗಳನ್ನು ಇಟ್ಟುಕೊಂಡಿರುವುದು ಪೊಲೀಸ್ ದಾಳಿಯ ಸಂದರ್ಭದಲ್ಲಿ ಪತ್ತೆಯಾಗಿದೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















