ಲೈವ್ ಟಿವಿ ನ್ಯೂಸ್

ದಿನಾಂಕ : 07-09-2025

ರಾಮಸಿಂಗ್ ತಾಂಡದ ಜನರ ರೋಚಕ ಕಥೆರಾಮಸಿಂಗ್ ತಾಂಡದ ಜನರ ರೋಚಕ ಕಥೆ

ವರದಿಗಾರರು : ಬಸವರಾಜ ಪೂಜಾರಿ
ವರದಿ ಸ್ಥಳ :ಬೀದರ್
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 26+

ರಾಮಸಿಂಗ್ ತಾಂಡಾದ ಜನರ ಕಂಪ್ಲೀಟ್ ಸ್ಟೋರಿ ಸ್ವಾತಂತ್ರ್ಯ ಸಿಕ್ಕಿ 78 ರಾಮಸಿಂಗ್ ತಾಂಡಾದ ಜನರ ಕಂಪ್ಲೀಟ್ ಸ್ಟೋರಿ ಕಳೆದು 79 ನೇ ವರ್ಷನಡೆಯುತಿದ್ದರು ರಸ್ತೆ ಮತ್ತು ಮೂಲಭೂತ ಸೌಕರ್ಯಗಳು ಇಲ್ಲದೆ ಪರದಾಡುತ್ತಿರುವ ರಾಮಸಿಂಗ್ ತಾಂಡಾ.

ಬೀದರ ಜಿಲ್ಲೆಯ ಗಡಿಯಲ್ಲಿ ಬರುವ ಔರಾದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭಂಡಾರಾಕುಮಟಾ ಗ್ರಾಮ ಪಂಚಾಯತ ಗ್ರಾಮ ಪಂಚಾಯ ವ್ಯಾಪ್ತಿಯಲ್ಲಿ ಬರುವ ರಾಮಸಿಂಗ್ ತಾಂಡಾದ ಜನರು ಯಾವುದೆ ಮೂಲ ಭೂತ ಸೌಕರ್ಯಗಳು ಮತ್ತು ರಸ್ತೆಯಿಲ್ಲದೆ ಅಸಹಾಯಕ ಸ್ಥಿತಿಯಲ್ಲಿ ಬದುಕುತಿದ್ದರು ಯಾವ ಅಧಿಕಾರಿಗಳಾಗಲಿ ರಾಜಕಾರಣಿಗಳಾಗಲಿ ಇದಕ್ಕೂ ನಮಗೂ ಯಾವುದೇ ಸಂಬಂದ ಎನ್ನುವ ರೀತಿಯಲ್ಲಿ ವರ್ತಿಸುತಿರುವದು ವಿಪರ್ಯಾಸವೆಂದು ಸರಿ . ಈ ತಾಂಡಾ ಮುಖ್ಯ ರಸ್ತೆಯಿಂದ 1.5 ಕಿಲೋ ಮೀಟರ್ ದೂರ ಇದೆ ಸ್ವತಂತ್ರ ಸಿಕ್ಕಿ78 ವರ್ಷ ಕಳೆದು 79 ನೇ ವರ್ಷದ ಸ್ವಾತಂತ್ರ್ಯ ಉತ್ಸವ ಆಚರಿಸಿದರು ಇಲ್ಲಿಯ ವರೆಗೆ ಕನಿಷ್ಠ ಕಚ್ಚಾರಸ್ತೆ ಕೂಡ ಅಧಿಕಾರಿಗಳಿಗೂ ಹಾಗೂ ರಾಜಕಾರಣಿಗಳಿಗೂ ನಿರ್ಮಾಣ ಮಾಡಿಲ್ಲವೆಂದು ತಾಂಡಾದ ಜನರು ತಮ್ಮ ಅಳಲನ್ನು ತೋಡಿಕೊಂಡರು.

ಅಷ್ಟೇ ಅಲ್ಲದೆ ಗ್ರಾಮಕ್ಕೆ ಮಂಜುರಾದ ಅಂಗನವಾಡಿ ಕೇಂದ್ರ ವನ್ನು ತಾಂಡಾದಲ್ಲಿ ನಿರ್ಮಾಣ ಮಾಡದೆ ಗ್ರಾಮ ಪಂಚಾಯತಿ ಅಧಿಕಾರಿಗಳು ಮುಖ್ಯ ರಸ್ತೆಯ ಪಕ್ಕದಲ್ಲಿ ನಿರ್ಮಾಣ ಮಾಡಿದ್ದಾರೆ ,ನಮ್ಮ ಮಕ್ಕಳನ್ನು ಶಾಲೆಗೆ ಹೇಗೆ ಕಳುಹಿಸುವದು, ಗರ್ಬಿಣಿ ಮಹಿಳೆಯರು ಆಸ್ಪತ್ರೆ ಹೋಗುವಾಗ ಇದೆ ರಸ್ತೆಯಲ್ಲೇ ಹೆರಿಗೆಯಾಗಿರುವ ಉದಾಹರಣೆಗಳಿವೆ ಎಂದು ಹೇಳಿದ ಸ್ಥಳಿಯರು ತಾಂಡಾದ ನಿವಾಸಿ ಹೃದಯ ನೋವಿನಿಂದ ಬಳಲುತ್ತಿರುವರು ,ಆಸ್ಪತ್ರೆಗೆ ಸಾಗಿಸಲು ಸರಿಯಾದ ರಸ್ತೆ ಇಲ್ಲದೆ ಅಸುನೀಗಿದಾರೆ ಎಂದು ಹೇಳಿ , ನಮಗೆ ಏನಾದರು ತುರ್ತುಪರಿಸ್ಥಿತಿ ಬಂದರೆ ಎಲ್ಲಿಗೂ ಹೋಗುವದಕ್ಕೆ ಆಗದೆ ದೇವರ ಮೇಲೆ ಭಾರ ಹಾಕಿ ಅಸಾಹಯಕರಾಗಿ ನೋಡುವಸ್ಥಿತಿಯಾಗಿದೆ, ನಮಗೆ ಅನುಸುತ್ತಿದೆ ನಾವು ಯಾವ ದೇಶದವರು, ನಮಗೂ ಇಲ್ಲಿನವರಿಗೂ ಯಾವುದೇ ಸಂಬಂದ ಇಲ್ಲವೇನೊ ಎನ್ನುವ ಹಾಗೆ ನಮ್ಮನ್ನು ಕಡೆಣಿಸುತ್ತಿದ್ದಾರೆ ಎಂದು ಅನುಸುತ್ತಿದೆ ,

ನಾವು ನಮ್ಮ ಅಧಿಕಾರಿಗಳಿಗೆ ಕೇಳುವದೇನೆಂದರೆ ದಯವಿಟ್ಟು ನಮ್ಮ ತಾಂಡಾಕ್ಕೆ ರಸ್ತೆ ನಿರ್ಮಿಸಿ ನಮ್ಮನು ಕಾಪಾಡುವಂತೆ ಕಳೆದ ಹಲವು ವರ್ಷಗಳಿಂದ ಅಧಿಕಾರಿಗಳ ಕಚೇರಿಗಳಿಗೆ ಅಲೆದು ಸಾಕಾಗಿದೆ ನಾವು ಮಾದ್ಯಮದ ಮೂಕಲ ಕಳೆದ ತಿಂಗಳು ಮನವಿ ಮಾಡಿಕೊಂಡರು ರಾಜಕಾರಣಿಗಳಾಗಲಿ,ಅಧಿಕಾರಿಗಳಾಗಲಿ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ನಮ್ಮ ಅಧಿಕಾರಿಗಳಿಗೆ ಜನರ ತೆರಿಗೆ ಹಣದಿಂದ ರಾಜಕಾರಣಿಗಳ ಫಾರ್ಮ್ ಹೌಸ್ ವರೆಗೂ ರಸ್ತೆ ಮಾಡಿಕೊಡುವ ಅಧಿಕಾರಿಗಳಿಗೆ ಗಡಿ ಭಾಗದಲ್ಲಿ ಬರುವ ಈ ಕುಗ್ರಾಮದ ತಾಂಡಾ ಕಾಣಿಸದಿರುವುದು ವಿಪರ್ಯಾಸವಾಗಿದ್ದು, ಜಿಲ್ಲಾಡಳಿತ ಜಿಲ್ಲಾಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಮತ್ತು ಶಾಸಕರಾದ ಪ್ರಭು ಚವ್ಹಾಣ ಅವರು ಕೂಡಲೇ ಗಮನ ಹರಿಸಿ ಶತಮಾನಗಳಿಂದ ರಸ್ತೆಯಿಲ್ಲದೆ ಯಾವುದೇ ಮೂಲಭೂತ ಸೌಕರ್ಯಗಳಿಂದ ವಚಿತರಾಗಿ ರಸ್ತೆ ಮತ್ತು ಮೂಲಭೂತಸೌಕರ್ಯವಿಲ್ಲದೆ ಬಕ ಪಕ್ಷಿಗಳಂತೆ ಕಾಯುತ್ತಿರುವ ಜನರ ಆಸೆಗಳನ್ನು ಈಡೆರಿಸುವರೋ ಅಥವಾ ಇಲ್ಲವೋ ಕಾದು ನೋಡಬೇಕಾಗಿದೆ . ವರದಿ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand