
ಲೈವ್ ಟಿವಿ ನ್ಯೂಸ್

ದಿನಾಂಕ : 16-08-2025
*ತಾಲೂಕ ಪಂಚಾಯತಿ ಕರ ವಸೂಲಿಗಾರರು, ಪತ್ರಕರ್ತರಿಗೆ ಹಾಗೂ ಉರಗ ರಕ್ಷಕರಿಗೆ ವಿಶೇಷ ಸನ್ಮಾನ*
ವರದಿಗಾರರು : ರಾಜಶೇಖರ ಮಾಲಿ ಪಾಟೀಲ್
ವರದಿ ಸ್ಥಳ :ಶಹಾಪುರ
ಒಟ್ಟು ಓದುಗರ ಸಂಖ್ಯೆ : 74+
*ಶಹಾಪುರ, ಆಗಸ್ಟ್ 16* ಗ್ರಾ.ಪಂ. ಸಂಪನ್ಮೂಲ ಕ್ರೋಡೀಕರಣ ಮಾಡದಿದ್ದರೆ ಗ್ರಾ.ಪಂ.ಗಳು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಗ್ರಾಮ ಪಂಚಾಯತಿಗಳ ಸಮಗ್ರ ಅಭಿವೃದ್ಧಿಗೆ ಕರ ವಸೂಲಿ ಅತ್ಯಗತ್ಯ. ಜಿಲ್ಲೆಯಲ್ಲಿ ಶಹಾಪುರ ಕಾರ ವಸೂಲಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಸಂತೋಷದ ವಿಷಯ. ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸೈನಿಕರಂತೆ ಕೆಲಸ ನಿರ್ವಹಿಸಬೇಕು. ಒಗ್ಗಟ್ಟು ಮತ್ತು ಉಮ್ಮಸ್ಸು ಮುಂದೆಯೂ ಇದೇ ರೀತಿ ಮುಂದುವರಿಯಲಿ, ನಾನು ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಧೈರ್ಯ ಮತ್ತು ಪ್ರವೇಶ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕರ ವಸೂಲಿ ಅಭಿಯಾನದಲ್ಲಿ ಹೆಚ್ಚಿನ ಕರ ವಸೂಲಿ ಮಾಡಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಅಭಿನಂದನಾ ಸಮಾರಂಭದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಲ್ಪಿಸಿಕೊಳ್ಳಲು ಸರ್ಕಾರದ ಅನುದಾನಕ್ಕಾಗಿ ಕಾಯದೆ ಸಂಪನ್ಮೂಲ ಕ್ರೋಢೀಕರಣಕ್ಕೆ ತಾವೇ ಮುಂದಾಗಬೇಕು. ಜಾಹೀರಾತು, ಮನೋರಂಜನೆ ಮೇಲಿನ ತೆರಿಗೆ, ನೀರಿನ ಬಳಕೆಯ ದರ, ಪರವಾನಗಿ ಶುಲ್ಕ, ವ್ಯಾಪಾರ, ಆರೋಗ್ಯ ಹಾಗೂ ಗ್ರಂಥಾಲಯ ಕರ ಸಂಗ್ರಹದಲ್ಲಿ ಹಿಂದೆ ಬೀಳಬಾರದು. ಜಿಲ್ಲೆಯಲ್ಲಿ ಶಹಾಪುರ ತಾಲೂಕಿನಲ್ಲಿ ಒಂದೇ ದಿನ 38.81 ಲಕ್ಷಕರ ಸಂಗ್ರಹ ಮಾಡಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕೆ ನಿಮಗೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಜಿಲ್ಲೆಯಲ್ಲಿ 1.48 ಕೋಟಿ ತರಹ ವಸಲಿಯಾಗಿದ್ದು, ಕೊನೆ ಸ್ಥಾನದಲ್ಲಿದ್ದ ಯಾದಗಿರಿ ಜಿಲ್ಲೆಯನ್ನು ಅಣೆ ಪಟ್ಟಿಯನ್ನು ಅಳಿಸಿದ್ದೀರಿ. ಮುಂದೆ ಸಹ ಸೈನಿಕರಂತೆ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಶರಬೈ ಅವರು, ಗ್ರಾಪಂಗಳು ಸರ್ಕಾರದ ಅನುದಾನಕ್ಕಿಂತ ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲಗಳ ಮೇಲೆ ನೌಕರರ ವೇತನ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ಅನುದಾನ ಬಳಸಬೇಕಾಗುತ್ತದೆ. ಹೀಗಾಗಿ ಗ್ರಾಪಂಗಳಿಗೆ ಸಾಕಷ್ಟು ವರಮಾನ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ. ಎನ್ನುವ ಸಮಸ್ಯೆ ನಮ್ಮೆಲ್ಲರಿಗೆ ಕಬ್ಬಿಣದ ಕಡಲೆಯಂತೆ ಇತ್ತು. ಆದರೆ ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಗ್ರಂಥಪಾಲಕರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಕರವಸಿದೆ ಅಭಿನಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದರಿಂದ ಹೆಚ್ಚಿನ ಕರಸಂಗ್ರಹಣೆ ಸಾಧ್ಯವಾಯಿತ. ಈ ಹುಮ್ಮಸ್ಸು ಮುಂದೆಯು ಇರಲಿ ಎಂದು ಆಶಿಸಿದರು. ಸನ್ಮಾನ. ಕರವಸಲ್ಲಿ ಅಭಿಯಾನದಲ್ಲಿ ಅತಿ ಹೆಚ್ಚು ಕರ ವಸೂಲಿ ಮಾಡಿದ ಉಕ್ಕಿನಾಳ, ಖಾನಾಪುರ ಹಾಗೂ ಗೋಗಿ ಕೆ ಪಂಚಾಯಿತಿ ಅಧಿಕಾರಿ ಮತ್ತು ಕರವಸಲಿಗಾರರನ್ನು ಸನ್ಮಾನಿಸಿ ಪ್ರಶoಸನಿಯ ಪತ್ರ ನೀಡಲಾಯಿತು. ಜೊತೆಗೆ ತಾಲೂಕಿನ 24 ಗ್ರಾಮ ಪಂಚಾಯಿತಿಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶoಸನಿಯ ಪತ್ರ ನೀಡಿದರು. ಉತ್ತಮ ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಸನ್ಮಾನ. ಇತ್ತೀಚೆಗೆ ಜಿಲ್ಲಾಮಟ್ಟದಲ್ಲಿ ಉತ್ತಮ ಪತ್ರಕರ್ತ ಪ್ರಶಸ್ತಿ ಪಡೆದ ತಾಲೂಕಿನ ಬಸವರಾಜ್ ಕರೆಗಾರ್ ಹಾಗೂ ಪತ್ರಿಕಾ ಫೋಟೋಗ್ರಾಫರ್ ಮಂಜುನಾಥ್ ಬಿರಾದಾರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಉರಗ ರಕ್ಷಕ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ವಿಶೇಷ ಸನ್ಮಾನಿಸಿ ಗೌರವಿಸಲಾಯಿತು.
ಕರ ವಸೂಲಿಯಲ್ಲಿ ಸಹಭಾಗಿತ್ವ. ತೆರಿಗೆ ವಸೂಲಿ ಅಭಿಯಾನ: ತಾಲೂಕಿನಲ್ಲಿ ವಿಶೇಷ ಕರ ವಸೂಲಿ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಡಿಇಒ, ವಾಟರ್ ಮ್ಯಾನ್‌ಗಳು, ಜಿಕೆಎಂ ಸೇರಿದಂತೆ ಗ್ರಾಪಂ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತ ಸಹಾಯಕ ನಿರ್ದೇಶಕಿ ಶಾರದಾ ನಾಗಲೋಟ, ತಾಲೂಕ ಯೋಜನಾಧಿಕಾರಿ ಸುಬ್ಬರಾಯ ಚೌದರಿ, ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾಯಪ್ಪ ಗೌಡ ಹುಡೆದ್, ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ಸಂಯೋಜಕ ಶಿವ್ ಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಹಾಗೂ ಕರವಸೂಲಿಗಾರರು, ಎಂ ಆರ್ ಡಬ್ಲ್ಯೂ, ಬಿ ಆರ್ ಡಬ್ಲ್ಯೂ ಭಾಗವಹಿಸಿದ್ದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















