
ಲೈವ್ ಟಿವಿ ನ್ಯೂಸ್

ದಿನಾಂಕ : 16-09-2025
ಕೆವಿಕೆ (ಕೃಷಿ ವಿಜ್ಞಾನ ಕೇಂದ್ರ ಸುತ್ತೂರು) ಕೃಷಿ ಇಲಾಖೆ ಹುಣಸೂರು, ತೋಟಗಾರಿಕೆ ಇಲಾಖೆ ಫಲಾನುಭವಿಗಳ ಕಾರ್ಯಕ್ರಮ
ವರದಿಗಾರರು : ಕೆಂದೇಶ್
ವರದಿ ಸ್ಥಳ :ಹುಣಸೂರು
ಒಟ್ಟು ಓದುಗರ ಸಂಖ್ಯೆ : 12+
ಸೆಪ್ಟೆಂಬರ್ 10, 2025 ರಂದು, ಕರುಣಕುಪ್ಪೆ ಗ್ರಾಮ ಪಂಚಾಯತ್‌ನಲ್ಲಿ ಐಟಿಸಿ ಎಂಎಸ್‌ಕೆ ಮತ್ತು ಔಟ್ ರೀಚ್ ಸಂಸ್ಥೆ ಸಹಯೋಗದೊಂದಿಗೆ ಕೆವಿಕೆ (ಕೃಷಿ ವಿಜ್ಞಾನ ಕೇಂದ್ರ ಸುತ್ತೂರು) ಕೃಷಿ ಇಲಾಖೆ ಹುಣಸೂರು, ತೋಟಗಾರಿಕೆ ಇಲಾಖೆ ಹುಣಸೂರು ಒಳಗೊಂಡು ಫಲಾನುಭವಿಗಳ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಔಟ್ ರೀಚ್ ಸಂಸ್ಥೆಯ ಯೋಜನಾ ಸಮನ್ವಯ ಅಧಿಕಾರಿ ನಂಜುಂಡಸ್ವಾಮಿ ಅವರು ಪ್ರಾಸ್ತಾವಿಕ ನುಡಿ ಮಾತನಾಡಿ, ಕಳೆದ 12 ವರ್ಷಗಳಿಂದ ಹುಣಸೂರು ಮತ್ತು ಕೆ.ಆರ್. ನಗರ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಯೋಜನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಇದರಲ್ಲಿ ಅವರು ಮುಖ್ಯವಾಗಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಕೆರೆ ಹೂಳು ತೆಗೆಯುವ ಕಾರ‍್ಯಕ್ರಮ ಮತ್ತು ರೈತರಿಗೆ ಸಸಿಗಳನ್ನು ಒದಗಿಸುವ ಕಾರ‍್ಯಕ್ರಮಗಳು ಮತ್ತು ಹವಾಮಾನ ಬದಲಾವಣೆಯಲ್ಲಿ ಬೆಳೆಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾತನಾಡಿದರು. ನಂತರ ಕೃಷಿ ವಿಜ್ಞಾನ ಕೇಂದ್ರದ ಬೀಜ ಸಂಸ್ಕರಣಾ ಸಂಶೋಧನಾ ತಜ್ಞೆ ಶ್ರೀಮತಿ ದಿವ್ಯಾ ಅವರು ಮಾತನಾಡಿ, ಬೀಜ ಸಂಸ್ಕರಣೆಯ ಪ್ರಯೋಜನಗಳ ಬಗ್ಗೆ ಹೇಳಿದರು ಮತ್ತು ಬೀಜ ಸಂಸ್ಕರಣೆಯಿಂದ ಬೆಳೆಗಳಿಗೆ ಯಾವುದೇ ರೋಗಗಳು ಉಂಟಾಗುವುದಿಲ್ಲ ಎಂದು ಪ್ರಾತ್ಯಕ್ಷಿಕೆಯ ಮೂಲಕ ಎಲ್ಲರಿಗೂ ವಿವರಿಸಿದರು, ಆದ್ದರಿಂದ ನೀವು ಯಾವುದೇ ಕೀಟನಾಶಕಗಳನ್ನು ಖರೀದಿಸದೆ ಬೆಳೆ ಬೆಳೆಯಬಹುದು ಮತ್ತು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು. ನಂತರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಣ್ಣ ರವರು ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಕೆಲಸಕ್ಕೆ ಸಹಕರಿಸುತ್ತಿರುವ ಎಲ್ಲಾ ಇಲಾಖೆಗಳಿಗೆ ಧನ್ಯವಾದ ಅರ್ಪಿಸಿದರು. ನಂತರ, ಹುಣಸೂರು ಕೃಷಿ ಉಪ ನಿರ್ದೇಶಕ ತಾಂತ್ರಿಕ ಕೃಷಿ ಅಧಿಕಾರಿ ಶ್ರೀ ಯುತ ಜಯಕುಮಾರ್ ರೈತರೊಂದಿಗೆ ಮಾತನಾಡಿದರು. ಬೀಜೋಪಚಾರ ಆಂದೋಲನ, ಕೃಷಿ ಇಲಾಖೆಗಳಿಂದ ಲಭ್ಯವಿರುವ ಯೋಜನೆಗಳು ಮತ್ತು ಮಣ್ಣಿನ ಮಹತ್ವದ ಬಗ್ಗೆ ಸಲಹೆ ನೀಡಿದರು. ಸಹಾಯಕ ತೋಟಗಾರಿಕಾ ಅಧಿಕಾರಿ ಹುಣಸೂರು ಶ್ರೀಯುತ ರವಿ ತೋಟಗಾರಿಕಾ ಇಲಾಖೆಯಲ್ಲಿ ಲಭ್ಯವಿರುವ ಹನಿ ನೀರಾವರಿ ವ್ಯವಸ್ಥೆ ಮತ್ತು ತೋಟಗಾರಿಕಾ ಬೆಳೆಗಳನ್ನು ಬಾಧಿಸುವ ರೋಗಗಳ ಬಗ್ಗೆ ವಿವರವಾಗಿ ಮಾತನಾಡಿದರು ಮತ್ತು ಅದಕ್ಕೆ ಸೂಕ್ತ ಪರಿಹಾರಗಳನ್ನು ಸಹ ಸೂಚಿಸಿದರು.
ಈ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್, ರೈತರಾದ ಕಣಗಾಲು ರಾಘವೇಂದ್ರ, ಪ್ರಗತಿಪರ ರೈತರಾದ ಕೆ ಎಂ ರಾಜು, ರೈತ ಕ್ಷೇತ್ರ ಪಾಠಶಾಲೆಯ ಸದಸ್ಯರು, ಸ್ವ-ಸಹಾಯ ಸಂಘದ ಸದಸ್ಯರು ಮತ್ತು ಕೃಷಿ ಸಖಿಯರು, ಕರುಣಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ನೂರಕ್ಕೂ ಹೆಚ್ಚು ರೈತರು ಮತ್ತು ಔಟ್ ರೀಚ್ ಸಿಬ್ಬಂದಿಗಳಾದ ಪ್ರಕಾಶ್ ಎಂ , ರಂಗಸ್ವಾಮಿ, ಸಾಗರ್, ಪ್ರಮೋದ್, ದಿಲೀಪ್, ಕಾರ್ತಿಕ್ ಮತ್ತು ಸತ್ಯವರ್ಮ ಉಪಸ್ಥಿತರಿದ್ದರು.
ವರದಿ-ಸೆಪ್ಟೆಂಬರ್ 10, 2025 ರಂದು, ಕರುಣಕುಪ್ಪೆ ಗ್ರಾಮ ಪಂಚಾಯತ್‌ನಲ್ಲಿ ಐಟಿಸಿ ಎಂಎಸ್‌ಕೆ ಮತ್ತು ಔಟ್ ರೀಚ್ ಸಂಸ್ಥೆ ಸಹಯೋಗದೊಂದಿಗೆ ಕೆವಿಕೆ (ಕೃಷಿ ವಿಜ್ಞಾನ ಕೇಂದ್ರ ಸುತ್ತೂರು) ಕೃಷಿ ಇಲಾಖೆ ಹುಣಸೂರು, ತೋಟಗಾರಿಕೆ ಇಲಾಖೆ ಹುಣಸೂರು ಒಳಗೊಂಡು ಫಲಾನುಭವಿಗಳ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಔಟ್ ರೀಚ್ ಸಂಸ್ಥೆಯ ಯೋಜನಾ ಸಮನ್ವಯ ಅಧಿಕಾರಿ ನಂಜುಂಡಸ್ವಾಮಿ ಅವರು ಪ್ರಾಸ್ತಾವಿಕ ನುಡಿ ಮಾತನಾಡಿ, ಕಳೆದ 12 ವರ್ಷಗಳಿಂದ ಹುಣಸೂರು ಮತ್ತು ಕೆ.ಆರ್. ನಗರ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಯೋಜನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಇದರಲ್ಲಿ ಅವರು ಮುಖ್ಯವಾಗಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಕೆರೆ ಹೂಳು ತೆಗೆಯುವ ಕಾರ‍್ಯಕ್ರಮ ಮತ್ತು ರೈತರಿಗೆ ಸಸಿಗಳನ್ನು ಒದಗಿಸುವ ಕಾರ‍್ಯಕ್ರಮಗಳು ಮತ್ತು ಹವಾಮಾನ ಬದಲಾವಣೆಯಲ್ಲಿ ಬೆಳೆಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾತನಾಡಿದರು. ನಂತರ ಕೃಷಿ ವಿಜ್ಞಾನ ಕೇಂದ್ರದ ಬೀಜ ಸಂಸ್ಕರಣಾ ಸಂಶೋಧನಾ ತಜ್ಞೆ ಶ್ರೀಮತಿ ದಿವ್ಯಾ ಅವರು ಮಾತನಾಡಿ, ಬೀಜ ಸಂಸ್ಕರಣೆಯ ಪ್ರಯೋಜನಗಳ ಬಗ್ಗೆ ಹೇಳಿದರು ಮತ್ತು ಬೀಜ ಸಂಸ್ಕರಣೆಯಿಂದ ಬೆಳೆಗಳಿಗೆ ಯಾವುದೇ ರೋಗಗಳು ಉಂಟಾಗುವುದಿಲ್ಲ ಎಂದು ಪ್ರಾತ್ಯಕ್ಷಿಕೆಯ ಮೂಲಕ ಎಲ್ಲರಿಗೂ ವಿವರಿಸಿದರು, ಆದ್ದರಿಂದ ನೀವು ಯಾವುದೇ ಕೀಟನಾಶಕಗಳನ್ನು ಖರೀದಿಸದೆ ಬೆಳೆ ಬೆಳೆಯಬಹುದು ಮತ್ತು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು. ನಂತರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಣ್ಣ ರವರು ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಕೆಲಸಕ್ಕೆ ಸಹಕರಿಸುತ್ತಿರುವ ಎಲ್ಲಾ ಇಲಾಖೆಗಳಿಗೆ ಧನ್ಯವಾದ ಅರ್ಪಿಸಿದರು. ನಂತರ, ಹುಣಸೂರು ಕೃಷಿ ಉಪ ನಿರ್ದೇಶಕ ತಾಂತ್ರಿಕ ಕೃಷಿ ಅಧಿಕಾರಿ ಶ್ರೀ ಯುತ ಜಯಕುಮಾರ್ ರೈತರೊಂದಿಗೆ ಮಾತನಾಡಿದರು. ಬೀಜೋಪಚಾರ ಆಂದೋಲನ, ಕೃಷಿ ಇಲಾಖೆಗಳಿಂದ ಲಭ್ಯವಿರುವ ಯೋಜನೆಗಳು ಮತ್ತು ಮಣ್ಣಿನ ಮಹತ್ವದ ಬಗ್ಗೆ ಸಲಹೆ ನೀಡಿದರು. ಸಹಾಯಕ ತೋಟಗಾರಿಕಾ ಅಧಿಕಾರಿ ಹುಣಸೂರು ಶ್ರೀಯುತ ರವಿ ತೋಟಗಾರಿಕಾ ಇಲಾಖೆಯಲ್ಲಿ ಲಭ್ಯವಿರುವ ಹನಿ ನೀರಾವರಿ ವ್ಯವಸ್ಥೆ ಮತ್ತು ತೋಟಗಾರಿಕಾ ಬೆಳೆಗಳನ್ನು ಬಾಧಿಸುವ ರೋಗಗಳ ಬಗ್ಗೆ ವಿವರವಾಗಿ ಮಾತನಾಡಿದರು ಮತ್ತು ಅದಕ್ಕೆ ಸೂಕ್ತ ಪರಿಹಾರಗಳನ್ನು ಸಹ ಸೂಚಿಸಿದರು.
ಈ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್, ರೈತರಾದ ಕಣಗಾಲು ರಾಘವೇಂದ್ರ, ಪ್ರಗತಿಪರ ರೈತರಾದ ಕೆ ಎಂ ರಾಜು, ರೈತ ಕ್ಷೇತ್ರ ಪಾಠಶಾಲೆಯ ಸದಸ್ಯರು, ಸ್ವ-ಸಹಾಯ ಸಂಘದ ಸದಸ್ಯರು ಮತ್ತು ಕೃಷಿ ಸಖಿಯರು, ಕರುಣಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ನೂರಕ್ಕೂ ಹೆಚ್ಚು ರೈತರು ಮತ್ತು ಔಟ್ ರೀಚ್ ಸಿಬ್ಬಂದಿಗಳಾದ ಪ್ರಕಾಶ್ ಎಂ , ರಂಗಸ್ವಾಮಿ, ಸಾಗರ್, ಪ್ರಮೋದ್, ದಿಲೀಪ್, ಕಾರ್ತಿಕ್ ಮತ್ತು ಸತ್ಯವರ್ಮ ಉಪಸ್ಥಿತರಿದ್ದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















