
ಲೈವ್ ಟಿವಿ ನ್ಯೂಸ್

ದಿನಾಂಕ : 07-08-2025
*ಪಡಿತರ ಆಹಾರ ವಿತರಣೆ: ಯಾದಗಿರಿ ಜಿಲ್ಲೆಯಲ್ಲಿ ಆಗಸ್ಟ್ 2025 ರ ಪಡಿತರ ಬಿಡುಗಡೆಗೆ*
ವರದಿಗಾರರು : ರಾಜಶೇಖರ ಮಾಲಿ ಪಾಟೀಲ್
ವರದಿ ಸ್ಥಳ :ಶಹಾಪುರ
ಒಟ್ಟು ಓದುಗರ ಸಂಖ್ಯೆ : 43+
*ಯಾದಗಿರಿ, ಆಗಸ್ಟ್ 06* ಜಿಲ್ಲೆಯಲ್ಲಿ ಆಗಸ್ಟ್ 2025 ರ ಮಾಹೆಗೆ ಪಡಿತರ ಆಹಾರ ಧಾನ್ಯಗಳ ವಿತರಣೆಯನ್ನು ಪ್ರಕಟಿಸಲಾಗಿದೆ. ಈ ಕುರಿತು ಯಾದಗಿರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಅನೀಲ ಕುಮಾರ ಡವಳಗಿ ಅವರು ಮಾಹಿತಿ ನೀಡಿದ್ದಾರೆ.
*ಪ್ರಮುಖ ಅಂಶಗಳು*
*ಅಂತ್ಯೋದಯ (AAY) ಪಡಿತರ ಚೀಟಿಗೆ*: ಒಂದು ಪಡಿತರ ಚೀಟಿಗೆ 14 ಕೆ.ಜಿ ಅಕ್ಕಿ ಮತ್ತು 21 ಕೆ.ಜಿ ಜೋಳ ವಿತರಿಸಲಾಗುವುದು. ಜೊತೆಗೆ, ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿ 5 ಕೆ.ಜಿ ಅಕ್ಕಿ ವಿತರಿಸಲಾಗುತ್ತದೆ.
*ಪಿ.ಹೆಚ್.ಹೆಚ್ (BPL) ಪಡಿತರ ಚೀಟಿಗೆ*: ಪ್ರತಿ ಫಲಾನುಭವಿಗೆ 2 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಜೋಳ ವಿತರಿಸಲಾಗುವುದು. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ ಉಚಿತ ಅಕ್ಕಿ ನೀಡಲಾಗುತ್ತದೆ.
*ರಾಜ್ಯ ವ್ಯಾಪ್ತಿಯ ಪಡಿತರ ಚೀಟಿಗೆ*: 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ವಿತರಣೆ. ರಾಜ್ಯ ಸರ್ಕಾರದ ಆದೇಶ ಮೇರೆಗೆ, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಅಂತ್ಯೋದಯ ಮತ್ತು ಪಿ.ಹೆಚ್.ಹೆಚ್ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
*ಗಮನ ಹರೀಸಬೇಕಾದ ಸಂಗತಿಗಳು*: ಒಂದು ರಾಷ್ಟ್ರ ಒಂದು ಪಡಿತರ ಚೀಟಿ: ಅಂತರ-ರಾಜ್ಯ ಮತ್ತು ಅಂತರ-ಜಿಲ್ಲಾ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ, ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶವಿದೆ.
*ದೂರುಗಳಿಗೆ ಸಂಪರ್ಕಿಸಿ*: ಪಡಿತರ ಕಡಿಮೆ ನೀಡಿದರೆ, ಹಣ ಕೇಳಿದರೆ ಅಥವಾ ಯಾವುದೇ ಇತರ ದೂರುಗಳಿದ್ದಲ್ಲಿ, ಉಚಿತ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಬಹುದು. ಅಥವಾ ತಾಲೂಕ ದಂಡಾಧಿಕಾರಿಗಳ ಕಚೇರಿ ಮತ್ತು ಜಿಲ್ಲೆಯ ಉಪನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬಹುದು.
ನಿಯಮ ಉಲ್ಲಂಘಿಸಿದರೆ ದಂಡ*: ಪಡಿತರ ಆಹಾರ ಧಾನ್ಯಗಳನ್ನು ಮಾರಾಟ ಮಾಡುವುದು ಅಥವಾ ಸಂಗ್ರಹಿಸುವುದು ಕಂಡುಬಂದಲ್ಲಿ, ಮುಕ್ತ ಮಾರುಕಟ್ಟೆ ದರಕ್ಕೆ ದಂಡ ವಿಧಿಸಿ, ಆರು ತಿಂಗಳ ಅವಧಿಗೆ ಪಡಿತರಚೀಟಿಯನ್ನು ಅಮಾನತು ಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















