
ಲೈವ್ ಟಿವಿ ನ್ಯೂಸ್

ದಿನಾಂಕ : 04-09-2025
ಶರಣ ಶರಣೆಯರು ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗಿ
ವರದಿಗಾರರು : ಬಸವರಾಜ್ ಪೂಜಾರಿ
ವರದಿ ಸ್ಥಳ :ಬೀದರ್
ಒಟ್ಟು ಓದುಗರ ಸಂಖ್ಯೆ : 19+
ಬೀದರ ಎವಿಬಿ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದಲ್ಲಿ ಬಸವ ರಥದ ಮೆರವಣಿಗೆ ಯಲ್ಲಿ ಸಹಸ್ರಾರು ಶರಣ ಶರಣೆಯರು ಭಾಗಿಯಾಗಿದ್ದರು....
ಆಂಕರ :-ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನದ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನಕ್ಕೆ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಯ ಅಪಾರ ಸಂಖ್ಯೆಯ ಶರಣ ಶರಣೆಯರು ಭಾಗಿಯಾಗಿದ್ದರು.. 12ನೇ ಶತಮಾನದ ಬಸವಾದಿ ಶರಣರ ಮೂರ್ತಿಗಳನ್ನು ಅಲಂಕರಿತ ವಾಹನದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು. ವಿವಿಧ ಜಾನಪದ ಕಲಾ ತಂಡಗಳು ಅದರ ಮೆರುಗು ಹೆಚ್ಚಿಸಿದವು. ಮಕ್ಕಳು ಬಾಲ ಶರಣರ ವೇಷದಲ್ಲಿ ಗಮನ ಸೆಳೆದರು. ಮಹಿಳೆಯರು ಇಳಕಲ್ ಸೀರೆ ಧರಿಸಿದರೆ, ಪುರುಷರು ಶ್ವೇತ ವರ್ಣದ ಅಂಗಿ ಹಾಗೂ ಧೋತರ ಧರಿಸಿಕೊಂಡು, ರುದ್ರಾಕ್ಷಿ ಮಾಲೆ ಹಾಕಿಕೊಂಡು ತಲೆಯ ಮೇಲೆ ವಚನ ಸಾಹಿತ್ಯ ಹೊತ್ತು ಹೆಜ್ಜೆ ಹಾಕಿದರು. ಒಬ್ಬ ಲಿಂಗಾಯತ, ಕೋಟಿ ಲಿಂಗಾಯತ’ ಭಾರತ ದೇಶ ಜೈ ಬಸವೇಶ’ ಎಂದು ಘೋಷಣೆ ಹಾಕಿದರು. ಮಾರ್ಗದುದ್ದಕ್ಕೂ ಬಸವಾದಿ ಶರಣರ ಪರ ಜೈಘೋಷ ಹಾಕಿದರು. ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಬೊಮ್ಮಗೊಂಡೇಶ್ವರ ವೃತ್ತ, ಚನ್ನಮ್ಮ ವೃತ್ತದ ಮೂಲಕ ಹಾದು ಬಿ.ವಿ. ಭೂಮರಡ್ಡಿ ಕಾಲೇಜು ತಲುಪಿತು. ಮಾರ್ಗದುದ್ದಕ್ಕೂ ಮೆರವಣಿಗೆ ಮೇಲೆ ಹೂಮಳೆಗರೆದು ಸ್ವಾಗತಿಸಲಾಯಿತು..
ಜನಗಣತಿ ಯಲ್ಲಿ ಲಿಂಗಾಯತ ಎಂದು ಬರೆಸಿ ದ್ವಂದ್ವಕ್ಕೆ ತೆರೆ ಎಳೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸಾಣೇಹಳ್ಳಿ ಶ್ರೀ.
ಸಾಣೇಹಳ್ಳಿ ತರಳಬಾಳು ಸಂಸ್ಥಾನ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಮುಂಬರುವ ಜನಗಣತಿ ಯಲ್ಲಿ ಧರ್ಮದ ಕಾಲಂ ನಲ್ಲಿ ಲಿಂಗಾಯತ ಎಂದು ಬರೆಸಿ ಜಾತಿ ಕಾಲಂ ಉಪಜಾತಿ ದಾಖಲಿಸಲು ಶ್ರೀ ಗಳು ದ್ವಂದ್ವ ಕ್ಕೆ ತೆರೆಎಳೆದ್ರು..
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ. ಬಸವಣ್ಣ ಕರ್ನಾಟಕಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕ. ಬಸವ ಸಂಸ್ಕೃತಿ ಅಂದ್ರೆ ಸಮಾನತೆ, ಮಾನವೀಯತೆ, ಸಾಮರಸ್ಯದ ಸಂಸ್ಕೃತಿಯಾಗಿದ್ದು, ಇಡೀ ವಿಶ್ವದಲ್ಲೇ ಬಸವ ಸಂಸ್ಕೃತಿ ಶ್ರೇಷ್ಠವಾಗಿದೆ ಎಂದರು. ಮೌಲ್ಯಯುತ ಜೀವನ ನಡೆಸಲು ವಚನ ಸಾಹಿತ್ಯ ಓದುವುದು ಅವಶ್ಯವಾಗಿದೆ. ವಚನ ಸಾಹಿತ್ಯದಲ್ಲಿ ಮೌಲ್ಯಯುತ ಜೀವನ ನಡೆಸಲು ಬೇಕಾಗುವ ಎಲ್ಲ ಅಂಶಗಳು ಉಲ್ಲೇಖವಾಗಿವೆ. ಹಾಗಾಗಿ ಮುಂದಿನ ಪೀಳಿಗೆಗೆ ವಚನ ಸಾಹಿತ್ಯದ ಮಹತ್ವ ತಿಳಿಸುವುದು ಅವಶ್ಯವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ನುಡಿದರು.....
ಈ ಸಂಧರ್ಭದಲ್ಲಿ ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಹಾಗು ಜಿಲ್ಲೆಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಶರಣ ಶರಣೆಯರು ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು....., ಬೈಟ 01) ಈಶ್ವರ ಖಂಡ್ರೆ ಅರಣ್ಯ ಸಚಿವ ಹಾಗು ಬೀದರ ಜಿಲ್ಲಾ ಉಸ್ತುವಾರಿ ಸಚಿವರು... ಬೈಟ 02) ಸಾಣೇಹಳ್ಳಿ ತರಳಬಾಳು ಸಂಸ್ಥಾನ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















