
ಲೈವ್ ಟಿವಿ ನ್ಯೂಸ್

ದಿನಾಂಕ : 12-09-2025
“ ಕಲಬುರ್ಗಿ ನಗರದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದ ೪೦ ಮನೆ ಜಲಾವೃತ”
ವರದಿಗಾರರು : ಮಲ್ಲಿಕಾರ್ಜುನ್
ವರದಿ ಸ್ಥಳ :ಕಲ್ಬುರ್ಗಿ
ಒಟ್ಟು ಓದುಗರ ಸಂಖ್ಯೆ : 22+
ಕಲಬುರಗಿ ನಗರದ ದಕ್ಷಿಣ ಮತಕ್ಷೇತ್ರದ ಬಿದ್ದಪುರ ಕಾಲೋನಿಯಲ್ಲಿ ವರ್ಷವಿಡೀ ಮಳೆಬಂದಾಗಲೆಲ್ಲ ಸುಮಾರು 40 ಮನೆಗಳು ನೀರಿನಲ್ಲಿಮುಳುಗಿವೆ, ಒಂದು ವರ್ಷದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಮತ್ತು ಕ್ಷೇತ್ರದ ಶಾಸಕರು ಮಾನ್ಯಅಲ್ಲಮಪ್ರಭು ಪಾಟೀಲ ರವರಿಗೆ ಒಂದು ವರ್ಷದಿಂದ ಮನವಿ ಸಲ್ಲಿಸಿದಾಗ ಮಾನ್ಯ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಒಂದು ತಿಂಗಳ ಹಿಂದೆ ಬಿದ್ದಪುರ ಕಾಲನಿಗೆ ಬಂದು ಮಳೆ ನೀರಿನಲ್ಲಿ ಮುಳುಗಿದ ಮನೆಗಳನ್ನು ಸ್ವತ ನೋಡಿ ಕೆಲಸ ಮಾಡುತ್ತೇವೆ ಎಂದು ಹೇಳಿ ಹೋದವರು ಇಲ್ಲಿಯ ತನಕ ಯಾವುದೇ ಕೆಲಸ ಮಾಡಿಲ್ಲ.
ನಿನ್ನೆಯಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಸುಮಾರು 40 ಮನೆಗಳು ಜಲಾವ್ರತಗೊಂಡಿದ್ದು ಈಗಲಾದರೂ ಸಮಸ್ಯೆ ಬಗೆಹರಿಸಬೇಕೆಂದು ಬಿದ್ದಪುರ ಕಾಲೋನಿಯ ನಿವಾಸಿಗಳು ಕ್ಷೇತ್ರದ ಶಾಸಕರು ಮಾನ್ಯಅಲ್ಲಮಪ್ರಭು ಪಾಟೀಲ ರ ವರಿಗೆ ಮನವಿ ಮಾಡಿದ್ದಾರೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















