
ಲೈವ್ ಟಿವಿ ನ್ಯೂಸ್

ದಿನಾಂಕ : 13-08-2025
*ವಾಲ್ಮೀಕಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ - ಮಗ್ದಂಪುರ*
ವರದಿಗಾರರು : ರಾಜಶೇಖರ ಮಾಲಿ ಪಾಟೀಲ್
ವರದಿ ಸ್ಥಳ :ಶಹಾಪುರ
ಒಟ್ಟು ಓದುಗರ ಸಂಖ್ಯೆ : 49+
*ಯಾದಗಿರಿ, ಆಗಸ್ಟ್ 12* ವಾಲ್ಮೀಕಿ ಸಮಾಜದ ಪ್ರಮುಖ ಬೇಡಿಕೆಗಳು ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಯಲು ನಗರದ ತಹಶಿಲ್ದಾರರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಆಗಸ್ಟ್ 13 ರಂದು ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಉತ್ತರ ಕರ್ನಾಟಕ ವಾಲ್ಮೀಕಿ ಸಮಾಜದ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪುರ ಹೇಳಿದರು.
ಪತ್ರಿಕೆ ಹೇಳಿಕೆ ನೀಡಿ ಮಾತನಾಡಿದ ಅವರು ಈ ಬೃಹತ್ ಪ್ರಮಾಣದ ಹೋರಾಟವನ್ನು ದಾವಣಗೇರ ವಾಲ್ಮೀಕಿ ಗುರು ಪೀಠದ ಜಗದ್ಗುರು ಪ್ರಸನ್ನನಂದ ಸ್ವಾಮಿಜಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಹೋರಾಟದಲ್ಲಿ ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಹಾಗೂ ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ವಾಲ್ಮೀಕಿ ಸಮಾಜದ ಭಾಂದವರು ಸುಮಾರು ಐದು ಸಾವಿರ ಜನರು ಈ ಹೋರಾಟದಲ್ಲಿ ಭಾಗವಸಲಿದ್ದಾರೆ ಎಂದರು
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಚಿವರನ್ನು ನೇಮಿಸದೆ ನಮ್ಮ ಸಮಾಜಕ್ಕೆ ಬರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಆಕಿ ತುಳಿತಕ್ಕೆ ಓಳಗಾದ ಸಮಾಜವನ್ನು ಮೂಲೆ ಗುಂಪು ಮಾಡುತ್ತಿರು ಸರ್ಕಾರದ ವಿರುದ್ಧ ಬೃಹತ್ ಹೋರಾಟವನ್ನು ಆಯೋಜಿಸಿದ್ದೇವೆ.
ಪರಿಶಿಷ್ಟ ಪಂಗಡದ ಸಮಾಜದ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ರಾಜ್ಯದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















