
ಲೈವ್ ಟಿವಿ ನ್ಯೂಸ್

ದಿನಾಂಕ : 15-09-2025
ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಹಬ
ವರದಿಗಾರರು : ದರ್ಶನ್ ಎಂ ಎನ್
ವರದಿ ಸ್ಥಳ :ದಾವಣಗೆರೆ
ಒಟ್ಟು ಓದುಗರ ಸಂಖ್ಯೆ : 15+
2025ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಥೀಮ್ ಲಿಂಗ ಸಮಾನತೆಯನ್ನು ಸಾಧಿಸುವುದು, ಹಂತ ಹಂತವಾಗಿ (“Achieving Gender Equality, Action by Action”) ಎಂದು ನಿಗದಿಯಾಗಿದೆ. ಈ ವಿಷಯವು ಇಂದಿನ ಪ್ರಜಾಪ್ರಭುತ್ವಗಳು ಎದುರಿಸುತ್ತಿರುವ ಸವಾಲುಗಳನ್ನು ಒತ್ತಿಹೇಳುವುದರ ಜೊತೆಗೆ, ಅವುಗಳಿಗೆ ಹೊಸದಾದ ಪರಿಹಾರಗಳನ್ನು ಕಂಡುಹಿಡಿಯುವ ಅಗತ್ಯವನ್ನು ಎತ್ತಿಹಿಡಿಯುತ್ತದೆ. ಅಂತರರಾಷ್ಟ್ರೀಯ ಸಂಸತ್ತಿನ ಒಕ್ಕೂಟ ಈ ದಿನದ ಥೀಮನ್ನು ನಿಗದಿ ಮಾಡುತ್ತದೆ. ಇದನ್ನು 10 ಗುರಿ ಕ್ರಮಗಳ ಮೂಲಕ ಬೆಂಬಲಿಸಲಾಗಿದೆ. ಮುಖ್ಯವಾಗಿ ಮೂರು ಕ್ಷೇತ್ರಗಳ ಮೇಲೆ ಒತ್ತು ನೀಡಲಾಗಿದೆ:
* ಸಂಸತ್ತು ಮತ್ತು ರಾಜಕೀಯದಲ್ಲಿ ಸಮಾನ ಪ್ರತಿನಿಧಿತ್ವವನ್ನು ಉತ್ತೇಜಿಸುವುದು. * ಲಿಂಗ ಸಂವೇದನಾಶೀಲ ಸಂಸ್ಥೆಗಳನ್ನು ಬೆಳೆಸಿ ಸಮಾನತೆ ಮತ್ತು ಒಳಗೊಂಡಿಕೆಯನ್ನು ಖಾತ್ರಿಪಡಿಸುವುದು. * ಲಿಂಗ ಆಧಾರಿತ ಹಿಂಸಾಚಾರ ಮತ್ತು ಭೇದಭಾವವನ್ನು ಕಡಿಮೆ ಮಾಡಿ ಸುರಕ್ಷಿತ ಮತ್ತು ನ್ಯಾಯಸಮ್ಮತ ಪ್ರಜಾಪ್ರಭುತ್ವದ ವಾತಾವರಣ ನಿರ್ಮಿಸುವುದು.
*ಪ್ರಜಾಪ್ರಭುತ್ವದ ಆಶಯಗಳನ್ನು ಗೌರವಿಸುವ ಸಲುವಾಗಿ ಜಾಗತಿಕವಾಗಿ ಪ್ರತಿ ವರ್ಷ ಸೆಪ್ಟೆಂಬರ್ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಣೆ ಮಾಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದಂತಹ ಶ್ರೀಮತಿ Dr ಪ್ರಭಾ ಮಲ್ಲಿಕಾರ್ಜುನ್ . ಮಾಯಕೊಂಡ ಕ್ಷೇತ್ರದ ಶಾಸಕರಾದ ಕೆ.ಎಸ್ ಬಸವಂತಪ್ಪ. ದುಡ.ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಮತ್ತು ಉಪಸ್ಥಿತರು ಭಾಗವಹಿಸಿದ್ದರು..
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















