ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025

ಕಲ್ಯಾಣಕರ್ನಾಟಕಉತ್ಸವ

ವರದಿಗಾರರು : ಹುಲಗಪ್ಪ ಎಮ್ ಹವಾಲ್ದಾರ
ವರದಿ ಸ್ಥಳ :ಯಾದಗಿರಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 10+

ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷರಾದ ಶ್ರೀ ಟಿ.ಎನ್. ಭೀಮುನಾಯಕ ರವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ರಾಷ್ಟಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು, ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಸರದಾರ ವಲ್ಲಭಬಾಯಿ ಪಟೇಲ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಾಣೆ ಮಾಡುವ ಮೂಲಕ ಗೌರವಿಸಿ ಮಾತನಾಡಿದ ಅವರು ಹೈದರಾಬಾದ ಕರ್ನಾಟಕ ವಿಮೋಚನಾದಿನ’ವನ್ನು ‘ಕಲ್ಯಾಣಕರ್ನಾಟಕಉತ್ಸವ’ವನ್ನಾಗಿ ಆಚರಿಸಲಾಗುತ್ತಿದೆ. ಉತ್ಸವದ ಹೊಸ್ತಿಲಲ್ಲಿರುವ ಸಂದರ್ಭಲ್ಲಿ ಈ ಭಾಗದ ಜನಸಮಸ್ಯೆಗಳ ಸಂಕೋಲೆಯಿಂದ ಮುಕ್ತವಾದರೇ?’ ಅಭಿವೃದ್ಧಿಯ ಸುಳಿಗಾಳಿ ಬೀಸುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವೇ ಸಿಗುತ್ತಿಲ್ಲ! ಅಭಿವೃದ್ಧಿ ಸಂಪೂರ್ಣ ಮರಿಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇವಲ ಉತ್ಸವ ಮಾಡುವುದರಿಂದ ಅಭಿವೃದ್ಧಿಯಾಗದು ಈ ಸರ್ಕಾರ ಕಲ್ಯಾಣ ಕರ್ನಾಟಕದ ಭಾಗಕ್ಕೆ ಕಳೆದ ವರ್ಷಕ್ಕಿಂತ ಈ ಬಾರಿ ಜಿಲ್ಲಾವಾರು ಸಚಿವಸ್ಥಾನ ನೀಡಿ ಈ ಭಾಗದ ಶಾಸಕರಿಗೆ ಅತೀ ಹೆಚ್ಚು ಜವಾದ್ಬಾರಿಯನ್ನು ನೀಡಿರುವುದು ಸಂತಸದ ವಿಷಯ ಆದರೆ ಕೇವಲ ಸ್ಥಾನಕ್ಕೆ ಮಾತ್ರ ಸೀಮಿತವಾಗದೆ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು, ಹಾಗೇ ನಿನ್ನೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬುಹುದಿನ ಬೇಡಿಕೆಯಾದ ಪ್ರತ್ಯೇಕ ಸಚಿವಾಲಯಕ್ಕೆ ಅನುಮೋದನೆ ನೀಡಿದ ಸಲುವಾಗಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಕರವೇ ಯಾದಗಿರಿ ಜಿಲ್ಲಾ ಘಟಕವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಂತೋಷಕುಮಾರ ನಿರ್ಮಲಕರ್, ಹಣಮಂತ ಅಚ್ಚೋಲಾ, ಭಿಮರಾಯ ರಾಮಸಮುದ್ರ, ನಾಗು ತಾಂಡೂರಕರ್, ಸುರೇಶ ಬೆಳಗುಂದಿ, ಜರ್ನಾಧನ ಬಡಿಗೇರಾ, ಸಾಗರಹುಲ್ಲೇರ, ಬಸವರಾಜ ಜಗನಾಥ, ಅಶೋಕ ಮುಂಡರಗಿ, ರಮೇಶ.ಡಿ.ನಾಯಕ, ಇನ್ನಿತರರು ಭಾಗಿಯಾಗಿದ್ದರು,

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand