
ಲೈವ್ ಟಿವಿ ನ್ಯೂಸ್

ದಿನಾಂಕ : 16-08-2025
*ಕುರಿಗಾರರ ಹಿತರಕ್ಷಣಾ ಕಾಯ್ದೆ ಜಾರಿಗಾಗಿ ಫ್ರೀಡಂ ಪಾರ್ಕ್ ನಲ್ಲಿ ಆ.19 ರಂದು ಬೃಹತ್ ಪ್ರತಿಭಟನೆ ಹೆಚ್ಚಿನ ಸಂಖ್ಯ
ವರದಿಗಾರರು : ರಾಜಶೇಖರ ಮಾಲಿ ಪಾಟೀಲ್
ವರದಿ ಸ್ಥಳ :ಶಹಾಪುರ
ಒಟ್ಟು ಓದುಗರ ಸಂಖ್ಯೆ : 35+
*ಶಹಾಪುರ, ಆಗಸ್ಟ್ 16* ಕುರಿಗಾರರ ಸಮಸ್ಯೆಗಳನ್ನು ಆಲಿಸಿದ ಸಿಎಂ ಕುರಿಗಾರರ ಹಿತ ರಕ್ಷಣಾ ಕಾಯ್ದೆಯನ್ನು ಬೇಗನೆ ಕಾನೂನಾತ್ಮಕವಾಗಿ ಜಾರಿಗೆ ತರಬೇಕೆಂದು ರೇವಣಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಾಳಪ್ಪ ಸುಂಕದ್ ಕೆಂಭಾವಿ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು, ಅಗಸ್ಟ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ರಾಜ್ಯಾದ್ಯಂತ ಕುರಿಗಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಯಾದಗಿರಿ ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಾರರು ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಕುರಿಗಾರರು ಹಗಲು ರಾತ್ರಿ ಬಿಸಿಲು ಚಳಿ ಲೆಕ್ಕಿಸದೆ ಕಾಡು ಮೇಡುಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕುರಿಗಾರರ ಮೇಲೆ ಹಲ್ಲೆ ದೌರ್ಜನ್ಯ ದಬ್ಬಾಳಿಕೆ ಕುರಿ ಕಳ್ಳತನ ನಡೆಯುತ್ತಿವೆ. ಇವು ಹಲವು ಸಮಸ್ಯೆಗಳನ್ನು ನಿವಾರಣೆ ಯಾಗಬೇಕಾದರೆ ಸರ್ಕಾರದಿಂದ ಕುರಿಗಾರರ ಹಿತ ರಕ್ಷಣಾ ಕಾಯ್ದೆ ಅತ್ಯಗತ್ಯವಾಗಿದೆ ಎಂದರು. ಬಂದೂಕು ನೀಡಲು ಸರಕಾರ ಆದೇಶಿಸಿದ್ದರೂ, ಕೆಲವೇ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಬಂದೂಕು ತರಬೇತಿ ನೀಡುತ್ತಿದ್ದಾರೆ.
ಇನ್ನುಳಿದ ಜಿಲ್ಲಾಧಿಕಾರಿಗಳು ಬಂದೂಕು ವಿತರಿಸಬೇಕು. ಕುರಿಗಾರರಿಗೆ ಡಿಸಿಸಿ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ವಿತರಿಸಬೇಕು.ಅಮೃತ ಸ್ವಾಭಿಮಾನಿ ಯೋಜನೆ ಮುಂದುವರಿಸಬೇಕು. ಸಮಯಕ್ಕೆ ಸರಿಯಾಗಿ ಕುರಿಗಳಿಗೆ ಔಷದಿ ವಿತರಿಸಬೇಕು ಎಂದು ಆಗ್ರಹಿಸಿದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















