ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025

ಶಿಕ್ಷಣವೇ ಶಕ್ತಿ - ಶ್ರೀ ಸ್ಯಾಮ್ಸನ್ ಬಂಟು,

ವರದಿಗಾರರು : ರಾಜಶೇಖರ ಮಾಲಿ ಪಾಟೀಲ್,
ವರದಿ ಸ್ಥಳ :ಯಾದಗಿರಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 7+

ವರ್ಲ್ಡ್ ವಿಜನ್ ಇಂಡಿಯಾ ಯಾದಗಿರಿ ಕ್ಷೇತ್ರ ಅಭಿವೃದ್ಧಿ ಯೋಜನೆ ಶಹಪುರ ಅವರು ಜಾಪಾನಾಯಕ್ ತಾಂಡ ಗ್ರಾಮದಲ್ಲಿ ಪರಿಹಾರ ಭೋದನಾ ಕೇಂದ್ರದಲ್ಲಿ ಅತಿ ಹೆಚ್ಚು ಅಂಕಗಳು ಗಳಿಸಿ ಪಾಸಾದ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತಾಡಿದ ಶ್ರೀ ಸ್ಯಾಮ್ಸನ್ ಬಂಟು, ಉಪ ನಿರ್ದೇಶಕರು ರಾಷ್ಟ್ರೀಯ ಕಚೇರಿ ಚೆನ್ನೈ ಅವರು ಶಿಕ್ಷಣವೇ ಶಕ್ತಿ, ಶಿಕ್ಷಣದಿಂದ ಮಾತ್ರ ಗ್ರಾಮವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನುಡಿದರು. ಕಥೆಗಳ ಮುಖಾಂತರ ಮಕ್ಕಳಿಗೂ ಮತ್ತು ಗ್ರಾಮಸ್ಥರಿಗೂ ಮನವರಿಕೆ ಮಾಡಿ ಕೊಟ್ಟರು ಶಿಕ್ಷಣ ಮಹತ್ವದ ಕುರಿತು ಮನವರಿಕೆ ಮಾಡಿಕೊಟ್ಟರು.

ಕಳೆದ ಒಂದು ವರ್ಷದಿಂದ ಸತತವಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಪರಿಹಾರ ಬೋಧನಾ ಈ ಕೇಂದ್ರದಲ್ಲಿ ನಡಿಸಲಾಯಿತು. ಪ್ರತಿದಿನ ಸಾಯಂಕಾಲ ಐದರಿಂದ ಏಳು ಗಂಟೆವರೆಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಯಿತು. ಈ ಕೇಂದ್ರದಲ್ಲಿ ಕನ್ನಡ ಮತ್ತು ಗಣಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕೆಗಳನ್ನು ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ಇದೇ ರೀತಿ ಸುಮಾರು 10 ಆಯ್ದ ಗ್ರಾಮಗಳಲ್ಲಿ ವಿಶೇಷ ಪರಿಹಾರ ಭೋದನಾ ಕೇಂದ್ರಗಳನ್ನು ಓಲ್ಡ್ ವಿಷನ್ ಇಂಡಿಯಾ ಸಂಸ್ಥೆ ವತಿಯಿಂದ ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಈ ಕಾರ್ಯಕ್ರಮವು ಬಹಳ ಉಪಯುಕ್ತವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಅನಿಲ್ ತೇಜಪ್ಪ ಅವರು ಮಾತನಾಡಿ ಸಂಸ್ಥೆಯ ಕಾರ್ಯಕ್ರಮಗಳ ವಿವರಣೆಯನ್ನು ಮಾಡಿದರು ಮತ್ತು ಅನೇಕ ಫಲಾನುಭವಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಾಯವನ್ನು ನೀಡಲಾಯಿತು. ಗ್ರಾಮದ ಎಲ್ಲಾ ಮಕ್ಕಳು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಷ ಪಟ್ಟರು. ಇಂದು ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ಉಂಟಾಗಿತ್ತು ಎಂದು ಅಬ್ದುಲ್ ಹಮೀದ್ ಮುಖ್ಯ ಗುರುಗಳು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮೌನೇಶ್, ಎಸ್ಡಿಎಂಸಿ ಅಧ್ಯಕ್ಷರು, ಶ್ರೀ ಹನುಮಂತ್ ಗ್ರಾಮ ಪಂಚಾಯಿತಿ ಕನ್ಯಾಕುಳ್ಳೂರ್, ಶ್ರೀ ಮಾರುತಿ ಚೌಹಾಣ್, ಶ್ರೀ ಶಂಕರ್ ಪೂಜಾರಿ, ಶ್ರೀ ಅಬ್ದುಲ್ ಅಹಮದ್ ಮುಖ್ಯ ಗುರುಗಳು, ಶ್ರೀಮತಿ ಅನಿತಾ ಚವಾನ್ ಮತ್ತು ಶ್ರೀಮತಿ ತಾರಾಬಾಯಿ ಅಂಗನವಾಡಿಯ ಶಿಕ್ಷಕೀಯರೂ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ರಾಬರ್ಟ್, ಮೈಕಲ್, ಮೆನಕಾ, ಸಿದ್ದಮ್ಮ, ಶಿವು, ಅಶೋಕ್, ಶರಣು, ರೇಖಾ, ಮಂಜುಳಾ ಮತ್ತು ಮಕ್ಕಳ ಸಂಘದ ನಾಯಕರುಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀ ಮಾರ್ಟಿನ್ ಶಾಂತಕುಮಾರ್ ಅವರು ನಿರೂಪಿಸಿದರು ಹಾಗೂ ಶ್ರೀ ಮೋಹನ್ ಕುಮಾರ್ ಅವರು ವಂದನಾರ್ಪಣೆಯನ್ನು ಮಾಡಿದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand