ಲೈವ್ ಟಿವಿ ನ್ಯೂಸ್

ದಿನಾಂಕ : 09-07-2025

*ರೈತ ಕೂಲಿ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ*

ವರದಿಗಾರರು : ರಾಜಶೇಖರ ಮಾಲಿಪಾಟೀಲ
ವರದಿ ಸ್ಥಳ :ಶಹಾಪುರ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 128+

*ಶಹಾಪುರ, ಜುಲೈ 09* ಅಖಿಲ ಭಾರತ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ಇಂದು ಬಸವೇಶ್ವರ ವೃತ್ತದ ಮುಖ್ಯ ರಸ್ತೆಯಿಂದ ಪಾದಯಾತ್ರೆ ಮೂಲಕ ತಾಲೂಕ ದಂಡಾಧಿಕಾರಿಗಳ ಕಚೇರಿಯ ವರ್ಗ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಧಿಕ್ಕಾರ ಕೂಗಿದರು, ರೈತ ಮುಖಂಡ ಚನ್ನಪ್ಪ ಆನೆಗುಂದಿ ಅವರ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ಮಾಡುವುದರ ಮೂಲಕ ದಂಡಾಧಿಕಾರಿ ಕಚೇರಿ ಮುಂದೆ ರಸ್ತೆ ರೋಕ್ ಚಳವಳಿ ನಡೆಸಿದರು.

ಪ್ರಯುಕ್ತ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಮತ್ತು ಕಾರ್ಪೊರೇಟ್ ನೀತಿಗಳನ್ನು ವಿರೋಧಿಸಿ ನಡೆಯುತ್ತಿರುವ ಈ ಮುಷ್ಕರದಲ್ಲಿ ಸುಮಾರು 25 ಕೋಟಿಗೂ ಹೆಚ್ಚು ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ರೈತ, ಕೂಲಿಕಾರ, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಕೆಗಾಗಿ ಮುಷ್ಕರ ಮಾಡುತ್ತೇವೆ ಎಂದು ರೈತ ಮುಖಂಡ ಚೆನ್ನಪ್ಪ ಆನೆಗುಂದಿ ಯವರು ಹೇಳಿದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೂಡಲೇ ರೈತ ಕೂಲಿ ಕಾರ್ಮಿಕರು 12 ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಮಾಡುವುದರ ಮೂಲಕ ಪ್ರತಿಭಟನಕಾರರು ತಾಲೂಕ ದಂಡಾಧಿಕಾರಿ ಉಮಾಕಾಂತ ಅಳ್ಳೆಯವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಚನ್ನಪ್ಪ ಆನೆಗುಂದಿ, ಅಮರಪ್ಪ ಎರುಂಡಿ, ಮುನಿಯಪ್ಪ ಗೌಡ, ಶ್ರೀಮತಿ ಬಸಲಿಂಗಮ್ಮ ನಾಟೇಕಾರ್, ಜೈಲಾಲ್ ತೋಟಮನಿ, ಶ್ರೀಮತಿ ಇಂದ್ರಾದೇವಿ ಪಸ್ಸಾರ್, ಮಲ್ಲಣ್ಣ ಬಿರೇದಾರ್, ಭೀಮರಾಯ ಪೂಜಾರಿ ಶ್ರೀಮತಿ ಯಮನಮ್ಮ ಕಸನ್, ಶ್ರೀಮತಿ ರಂಗಮ್ಮ ಕಟ್ಟಿಮನಿ, ಶ್ರೀಮತಿ ಈರಮ್ಮ ಹೈಯಾಳಕರ್, ಭೀಮಣ್ಣ ಟಪ್ಪೆದಾರ್ ಹಾಗೂ ಕೂಲಿ ಕಾರ್ಮಿಕರು, ಬಿಸಿ ಊಟ ಕಾರ್ಯಕರ್ತರು ಪ್ರತಿಭಟನೆ ಭಾಗವಹಿಸಿದ್ದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand