
ಲೈವ್ ಟಿವಿ ನ್ಯೂಸ್

ದಿನಾಂಕ : 14-09-2025
ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ
ವರದಿಗಾರರು : ಬಸವರಾಜ ಪೂಜಾರಿ
ವರದಿ ಸ್ಥಳ :ಬೀದರ
ಒಟ್ಟು ಓದುಗರ ಸಂಖ್ಯೆ : 8+
ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಸಸಿ ವಿತರಿಸಿದ ನವದೆಹಲಿಯಲ್ಲಿ ಅಮೆರಿಕ ಸರ್ಕಾರದ ವೀಕ್ಷಕ ಡಾ. ರಿಚರ್ಡ್ ಬೆಂಕಿನ್ ಅವರಿಗೆ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ
ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಪ್ರಯುಕ್ತ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಅವರು ನವದೆಹಲಿಯಲ್ಲಿ ಬುಧವಾರ ಭಾರತ ಪ್ರವಾಸದಲ್ಲಿರುವ ಅಮೆರಿಕ ಸರ್ಕಾರದ ವೀಕ್ಷಕ ಡಾ. ರಿಚರ್ಡ್ ಬೆಂಕಿನ್ ಅವರಿಗೆ ಸಸಿ ವಿತರಿಸಿದರು.ಅಭಿಯಾನವನ್ನು ಜಾಗತಿಕ ಮಟ್ಟಕ್ಕೆ ಒಯ್ಯಲು ಡಾ. ರಿಚರ್ಡ್ ಬೆಂಕಿನ್ ಅವರಿಗೆ ಸಸಿ ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.ತಾಯಿ ಹಾಗೂ ಗುರುವಿನ ಹೆಸರಲ್ಲಿ ಸಸಿ ನೆಡುವ ಅಭಿಯಾನ ಎಲ್ಲೆಡೆ ನಡೆದಲ್ಲಿ ಭೂಮಿ ಹಸಿರಾಗಲಿದೆ. ಇದರಿಂದ ಸಕಾಲಕ್ಕೆ ಮಳೆಯಾಗಲಿದೆ. ಶುದ್ಧ ಗಾಳಿಯೂ ಸಿಗಲಿದೆ. ಹೀಗಾಗಿ ಅಂತರರಾಷ್ಟ್ರೀಯ ಮಟ್ಟದ ಅಭಿಯಾನಗಳ ಅಗತ್ಯವಿದೆ ಎಂದು ತಿಳಿಸಿದರು.ವಿವಿಧ ದೇಶಗಳ ಪ್ರವಾಸದ ಸಂದರ್ಭದಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳುವ ಕುರಿತು ಸಂಶೋಧಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಪರಿಸರವಾದಿಗಳ ಗಮನ ಸೆಳೆಯಲಾಗುವುದು ಎಂದು ಡಾ. ರಿಚರ್ಡ್ ಬೆಂಕಿನ್ ಹೇಳಿದರು.ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಭಿಯಾನ ಹಮ್ಮಿಕೊಂಡು ಪರಿಸರ ಕಾಳಜಿ ತೋರಿರುವ ಶಿವಯ್ಯ ಸ್ವಾಮಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಸಂಶೋಧಕ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರರೂ ಆದ ಡಾ. ರಿಚರ್ಡ್ ಬೆಂಕಿನ್ ಬಾಂಗ್ಲಾದೇಶದಲ್ಲಿ ಹಿಂದುಗಳ ಮಾನವ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ್ದರು.ಸೋಮವೀರ ಬೇನಿವಾಲ್, ಭೂಮಿಕಾ ಅಮಿತಾಬ್ ತ್ರಿಪಾಠಿ, ಬಲರಾಜ್ ಗೌತಮ್ ಇದ್ದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















