ಲೈವ್ ಟಿವಿ ನ್ಯೂಸ್

ದಿನಾಂಕ : 11-08-2025

*ಸಾಲ ಬಾದೆ ತಾಳದೇ ರೈತ ಆತ್ಮಹತ್ಯೆ*

ವರದಿಗಾರರು : ಹುಲಗಪ್ಪ ಎಮ್ ಹವಾಲ್ದಾರ
ವರದಿ ಸ್ಥಳ :ಸುರಪುರ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 95+

ಸುರಪುರ : ಸಾಲದ ಬಾಧೆ ತಾಳದೆ ಸುರಪುರ ತಾಲೂಕಿನ ವಾರಿ ಸಿದ್ದಾಪುರ ಗ್ರಾಮದ ಭೀಮಣ್ಣ ದೇವೀಂದ್ರಪ್ಪ ಕೊಳ್ಳೂರು (53) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ದೇವೀಂದ್ರಪ್ಪ ನಿಗೆ ಮೂರು ಜನ ಗಂಡು ಎರಡು ಹೆಣ್ಣು ಮಕ್ಕಳಿದ್ದಾರೆ. ಇರುವ ಸ್ವಲ್ಪ ಜಮೀನಿನಲ್ಲಿ ಉಳುಮೆ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಸುರಪುರದಲ್ಲಿರುವ ಬ್ಯಾಂಕ್‌ ಗಳಲ್ಲಿ ಸಾಲ ಪಡೆದುಕೊಂಡಿದ್ದರು, ಅಲ್ಲದೆ ಖಾಸಗಿಯಾಗಿ 8 ರಿಂದ 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಕೆಲ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿಯೂ ಸಹ ಸಾಲ ಪಡೆದಿದ್ದ ಎನ್ನಲಾಗಿದೆ.

ಕಳೆದ ವರ್ಷದಿಂದ ಬೆಳೆಗಳು ಹಾನಿಯಾಗಿ, ಸಾಲವನ್ನು ಹಿಂತಿರುಗಿಸಲಾಗದೇ ಸಾಲಕ್ಕೆ ಹೆದರಿ ಶುಕ್ರವಾರ ಬೆಳಿಗ್ಗೆ ತನ್ನ ಜಮೀನಿಗೆ ತೆರಳಿ, ವಿಷ ಸೇವಿಸಿದ್ದಾನೆ ಎಂದು ತಿಳಿದುಬಂದಿದೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand