
ಲೈವ್ ಟಿವಿ ನ್ಯೂಸ್

ದಿನಾಂಕ : 11-09-2025
ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ವರದಿಗಾರರು : ಮಲ್ಲಿಕಾರ್ಜುನ್,
ವರದಿ ಸ್ಥಳ :ಕಲಬುರ್ಗಿ
ಒಟ್ಟು ಓದುಗರ ಸಂಖ್ಯೆ : 21+
ಬಿಜೆಪಿಯವರಿಗೆ ಕೆಲಸ ಇಲ್ಲ, ಕೇಂದ್ರ ಸರ್ಕಾರದಿಂದ ಆಗ್ತಿರುವ ಅನ್ಯಾಯದ ಬಗ್ಗೆ ಮಾತಾಡಲ್ಲ,ಅಸ್ತಿತ್ವ , ಕುರ್ಚಿ ಉಳಿಸಿಕೊಳ್ಳಲು , ಆರ್ ಎಸ್ ಎಸ್ ಮನವೋಲಿಸಲು ಈ ರೀತಿ ಮಾತಾಡ್ತಾರೆ. ಮದ್ದೂರ ಶಾಂತಿ ಸಭೆಗೆ ಇವರು ಬಂದಿಲ್ಲ, ಸ್ವಲ್ಪವು ನಾಚಿಕೆ ಇದೇನಾ ,ಪೆಹಲ್ಗಾಮ್ ಅಟ್ಯಾಕ್ ಆದ ಮೇಲೂ ಯಾಕೆ ಇಂಡಿಯಾ ಪಾಕಿಸ್ತಾನ್ ಮಾಡ್ತಾರೆ.ಹೊದ ಬಾರಿ ಮಂಡ್ಯ ಚಲೋ ಈ ಬಾರಿ ಮದ್ದೂರು ಚಲೋ ಮಾಡಿದ್ರು ಏನಾಯಿತು ಧರ್ಮಸ್ಥಳ ಚಲೋ ಮಾಡಿದ್ರು , ಸೌಜನ್ಯ ಮನೆಗೆ ಹೋದ್ರು ಇವರು ಧರ್ಮಸ್ಥಳದ ಪರವಾಗಿ ಇದ್ದಾರ ಸೌಜನ್ಯ ಪರವಾಗಿ ಇದ್ದಾರ ಸ್ಪಷ್ಟಪಡಿಸಲಿ ,ಬಿಜೆಪಿಯವರು ಅಮಾಯಕರನ್ನ ಮುಂದೆ ಇಟ್ಟುಕೊಂಡು ಹೋರಾಟ ಮಾಡೋದು ಬಿಡಿ, ನಿಮ್ಮ ನಿಮ್ಮ ಮಕ್ಕಳನ್ನ ವಿದೇಶಗಳಿಂದ ವಾಪಸ್ ಕರೆಯಿಸಿ, ಅವರನ್ನ ಮುಂದೆ ಬಿಟ್ಟು ಹೋರಾಟ ಮಾಡಿ ಕೇವಲ ಬಡವರ ಮಕ್ಕಳನ್ನ ಮುಂದಿಟ್ಟುಕೊಂಡು ಹೋರಾಟ ಮಾಡೋದು ಸರಿನಾ , ನಾವುಕುಕ್ಕರ್ ಬ್ಲಾಸ್ಟ್ ಕೇಸ್ ನಲ್ಲಿ ಅರಗ ಜ್ಞಾನೇಂದ್ರ ಅವರ ಊರಲ್ಲಿ ತರಬೇತಿ ಪಡೆದಿದ್ರು ಸಂಗಮೇಶ್ ಅವರು ಹೇಳಿಕೆ 20 ವರ್ಷ ಹಿಂದೆ ಕೊಟ್ಟಿರೋದು ಅಂತಾ ಅವರೇ ಹೇಳಿದ್ದಾರೆ. ಕುಮಾರಸ್ವಾಮಿ , ದೇವೆಗೌಡರ ಏನ್ ಹೇಳಿಕೆ ನೀಡಿದ್ರು ನೋಡಿಕೊಳ್ಳಲಿ ನಾನು ಯಾವ ಧರ್ಮ ಬೇಕು ಆ ಧರ್ಮ ಹೋಗೊಕೆ ಅವಕಾಶ ಇದೆ ಎಂದು ಮಾತನಾಡಿದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















