
ಲೈವ್ ಟಿವಿ ನ್ಯೂಸ್

ದಿನಾಂಕ : 09-09-2025
ಅಂದ ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ
ವರದಿಗಾರರು : ಹೆಚ್ ಎಂ ಹವಾಲ್ದಾರ್
ವರದಿ ಸ್ಥಳ :ಬಾಗಲಕೋಟೆ
ಒಟ್ಟು ಓದುಗರ ಸಂಖ್ಯೆ : 18+
ಹುಚ್ಚುನಾಯಿಯೊಂದು ಅಂಧ ವಿದ್ಯಾರ್ಥಿಗಳ ನ್ನು ಸೇರಿ ಒಟ್ಟು ಹದಿನೈದು ಜನರನ್ನ ಕಡಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬಾಗಲಕೋಟೆಯ ನವನಗರದ ಸಜೀವಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದಿದೆ.ಗಾಯಗೊಂಡ ವಿದ್ಯಾರ್ಥಿಗಳನ್ನು ಹಾಗೂ ಶಾಲೆಯ ಸಿಬ್ಬಂದಿ ಮತ್ತು ಇತರರನ್ನು ನವನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ ದಿನವೂ ಹುಚ್ಚುನಾಯಿ ಅಂಧ ವಿದ್ಯಾರ್ಥಿನಿಯನ್ನು ಕಡಿದು ಗಾಯಗೊಳಿಸಿದೆ.ಇಂದು ಮತ್ತೆ ಹುಚ್ಚು ನಾಯಿಯ ದಾಳಿ ಮುಂದುವರೆಸಿ ಇದು ಬರೆಗೆ ಹದಿನೈದ ಜನರನ್ನ ಕಚ್ಚಿ ಗಾಯಗೊಳಿಸಿದೆ.
ಇನ್ನು ಬಾಗಲಕೋಟೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ನವನಗರದ ಸಜೀವಿ ಅಂಧ ಮಕ್ಕಳ ಶಾಲೆಯ ಸುತ್ತಲೂ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ.ಅದರಲ್ಲೂ ಹುಚ್ಚು ನಾಯಿಯೊಂದರ ಹಾವಳಿ ಹೆಚ್ಚಾಗಿದ್ದು ಅಂಧ ಮಕ್ಕಳನ್ಮ ಕಡಿದು ಗಾಯಗೊಳಿಸುತ್ತಿದೆ. ಈ ಕುರಿತು ಸಜೀವಿ ಅಂಧ ಮಕ್ಕಳ ಶಾಲೆಯ ಶಿಕ್ಚಕಿ ಹೇಮಾವತಿ ಅವರು ಮಾತನಾಡಿದ್ದು, ಸಂಬಂಧಿಸಿದ ನಗರಸಭೆಯವರು ಬೀದಿನಾಯಿಗಳ ಹಾವಳಿಗೆ ಬ್ರೆಕ್ ಹಾಕಬೇಕು ಎಂದು ಮನವಿ ಮಾಡಿದ್ದಾರೆ
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















