ಲೈವ್ ಟಿವಿ ನ್ಯೂಸ್

ದಿನಾಂಕ : 15-09-2025

ಗಂಗಾವತಿ ವಿಧಾನಸಭಾ ಕ್ಷೇತ್ರದ ಲ್ಯಾಂಡ್ ಆರ್ಮಿ ಕಾಮಗಾರಿಗಳು ಕಳಪೆ ಸ್ಥಳೀಯರ ಆರೋಪ.

ವರದಿಗಾರರು : ಶರಣಪ್ಪ ಗಂಗಾವತಿ
ವರದಿ ಸ್ಥಳ :ಗಂಗಾವತಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 14+

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊಪ್ಪಳ ಜಿಲ್ಲೆಯ ಲ್ಯಾಂಡ್ ಆರ್ಮಿ ಇಲಾಖೆ ಅಧಿಕಾರಿಗಳು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳನ್ನು ಪರಿಶೀಲನೆ ಮಾಡದೆ ಬಿಲ್ ಪಾವತಿ ಮಾಡಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಗಂಗಾವತಿ ಕ್ಷೇತ್ರದ ಹೊಸಳ್ಳಿ ಗ್ರಾಮದ ಭಾಗ್ಯನಗರದಲ್ಲಿ 386 ಮೀಟರ್ ಉದ್ದದ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣ ಆಗುವ ಮುನ್ನವೇ ಅನುದಾನ ಬಿಡುಗಡೆ ಆಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

150 ಮೀಟರ್ ಕಳಪೆ ಕಾಮಗಾರಿ ಮಾಡಿ ಬಿಲ್ ಪಾವತಿ ಮಾಡಿಕೊಂಡಿದ್ದಾರೆ ಎನ್ನುವಂತಹ ಆರೋಪಗಳು ಕೇಳಿಬರುತ್ತಿದೆ. ಇನ್ನು ಕಾಮಗಾರಿ ಬಾಕಿ ಇದ್ದರು ಇಲ್ಲಿನ ಅಧಿಕಾರಿಗಳು ಪರಿಶೀಲನೆ ನಡೆಸದೆ ಅನುದಾನ ಬಿಡುಗಡೆ ಮಾಡಿರುವುದು ಸೂಕ್ತವಲ್ಲ ಆದಷ್ಟು ಬೇಗನೆ ಇದನ್ನು ಮೇಲಧಿಕಾರಿಗಳು ಪರಿಶೀಲನೆ ನಡೆಸಬೇಕು ಮತ್ತು ಸ್ಥಳೀಯ ಶಾಸಕರು ಸನ್ಮಾನ್ಯ ಶ್ರೀ ಗಾಲಿ ಜನಾರ್ಧನ್ ರೆಡ್ಡಿಯವರು ಕಳಪೆ ಕಾಮಗಾರಿ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಮುಂದಾಗಬೇಕೆಂದು ಸ್ಥಳೀಯರು ವೆಂಕಟೇಶ್ವರ ಮತ್ತು ದಲಿತ ಸಮಿತಿ ಹೋರಾಟಗಾರ ಮರಿಯಪ್ಪ, ಶರಣಪ್ಪ, ದುರ್ಗೇಶ್, ಯಮನೂರ, ಸೇರಿದಂತೆ ವಾರ್ಡಿನ ಜನರು ಒತ್ತಾಯಿಸಿದ್ದಾರೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand