
ಲೈವ್ ಟಿವಿ ನ್ಯೂಸ್

ದಿನಾಂಕ : 13-09-2025
ಕುಡಿದ ಮತ್ತಿನಲ್ಲಿ ಸ್ನೇಹಿತನ ಬರ್ಬರ ಹತ್ಯೆ
ವರದಿಗಾರರು : ಹೆಚ್ ಎಂ ಹವಾಲ್ದಾರ್
ವರದಿ ಸ್ಥಳ :ಬಾಗಲಕೋಟೆ
ಒಟ್ಟು ಓದುಗರ ಸಂಖ್ಯೆ : 17+
ಬಾಗಲಕೋಟೆ ಜಿಲ್ಲೆ ಬಿಳಗಿ ತಾಲೂಕಿನ ಗಲಗಲಿ ಎಂಬ ಗ್ರಾಮದಲ್ಲಿ ಬಸಯ್ಯ ಮಠಪತಿ ಹಾಗೂ ಬಸಯ್ಯಲಿಂಗನೂರು ಎಂಬ ಇಬ್ಬರು ಸ್ನೇಹಿತರು ಮತ್ತಿಬ್ಬರ ಸ್ನೇಹಿತರ ಜೊತೆ ಹೊರವಲಯದಲ್ಲಿ ಭರ್ಜರಿಯಾಗಿ ಪಾರ್ಟಿಯನ್ನು ಮಾಡಿಕೊಂಡು ಬಸಯ್ಯ ಲಿಂಗನೂರ ಎಂಬ ಯುವಕನ ಜೊತೆ ಕುಡಿದ ಮತ್ತಿನಲ್ಲಿ ತೇಲಾಡುತ್ತಾ ಇಬ್ಬರು ಸ್ನೇಹಿತರು ಕಾಲಿ ಇದ್ದ ಮನೆಗೆ ಬಂದಿರುತ್ತಾರೆ.
ನಶೆಯಲ್ಲಿ ತೇಲಾಡುತ್ತಿದ್ದ ಸ್ನೇಹಿತನನ್ನು ಬಸಯ್ಯ ಮಠಪತಿ ಯವರನ್ನು ಹಿಗ್ಗ ಮುಗ್ಗ ತಳಿಸಿ ಬೆಲ್ಟಿನಿಂದ ಬಿಗಿದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ , ತಮ್ಮ ಖಾಲಿ ಮನೆಗೆ ನಶೆಯಲ್ಲಿ ತೇಲಾಡುತ್ತಾ ಹೋದ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ,ಸ್ಥಳೀಯ ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ,ಬಸಯ್ಯಲಿಂಗನೂರು ಸ್ವಲ್ಪ ಸಮಯದ ನಂತರ ಬೈಕ್ ತೆಗೆದುಕೊಂಡು ಹೋಗಿರುವುದು ಘಟನೆ ಕಂಡು ಬಂದಿದೆ, ಬಸಯ್ಯಲಿಂಗನೂರು ಕೊಲೆ ಮಾಡಿರುವದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ .ಕಾಣೆಯಾಗಿರುವ ಬಸಯ್ಯಲಿಂಗನೂರು ರವರ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















