ಲೈವ್ ಟಿವಿ ನ್ಯೂಸ್

ದಿನಾಂಕ : 16-09-2025

ಬೀದರ್ ನಲ್ಲಿ ಮಲತಾಯಿಯಿಂದ ಕಂಡ ಪುಟ್ಟ ಕಂದಮ್ಮ. ದಾರುಣ ಅಂತ್ಯ

ವರದಿಗಾರರು : ಡಾ ಜ್ಯೋತಿ
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 9+

ಮೂರನೇ ಮಹಡಿಯಿಂದ 7 ವರ್ಷದ ಪುಟ್ಟ ಮಗು ನೂಕಿ ಕೊಲೆ ಮಾಡಿದ್ಲಾ ಮಲತಾಯಿ. 7 ವರ್ಷದ ಮಗಳನ್ನೇ ಕೊಂದ ಆರೋಪಿ ಮಲತಾಯಿ ಅರೆಸ್ಟ್. ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ಆ.27ರಂದು ನಡೆದ ಘಟನೆ ತಡವಾಗಿ ಬೆಳಕಿಗೆ. ಪಕ್ಕದ ಮನೆಯವರು ಸಿಸಿಟಿವಿ ದೃಶ್ಯ ಕಳುಹಿಸಿದ ಬಳಿಕ ಮಲತಾಯಿ ಕೃತ್ಯ ಬೆಳಕಿಗೆ. ಮಲತಾಯಿಯ ಕ್ರೌರ್ಯದಿಂದ ಬಲಿಯಾದ 7 ವರ್ಷದ ಬಾಲಕಿ ಶಾನವಿ ಮೃತ ಶಾನವಿ ಮಲತಾಯಿ ರಾಧಾ ಎಂಬಾಕೆಯ ವಿರುದ್ಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಮೃತ ಬಾಲಕಿ ಅಜ್ಜಿ ವಿಜಯಶ್ರೀ ಸುರೇಶ್ ತೂಗಾಂವೆ ದೂರಿನ ಮೇರೆಗೆ ಕೇಸ್ ದಾಖಲು. ಮನೆ ಮೇಲೆ ಆಟ ಆಡುವ ಮಗಳನ್ನು ತಳ್ಳಿ ಕೊಲೆ ಮಾಡಿದ ಮಲತಾಯಿ ರಾಧಾ.? ಆಗಸ್ಟ್ 27 ನೇ ತಾರೀಖು ಶಾನವಿ ಸಾವನ್ನಪ್ಪಿದಾಗ, ಆಯತಪ್ಪಿ ಬಿದ್ದು ಮಗಳು ಸಾವನ್ನಪ್ಪಿದ್ದಾಳೆ ಎಂದು ಅಂದುಕೊಂಡಿದ್ದ ಕುಟುಂಬಸ್ಥರು. ಹೀಗಾಗಿ ಆ.28 ನೇ ತಾರೀಖು ಆಕಸ್ಮಿಕ ಸಾವು ಎಂದು ಗಾಂಧಿ ಗಂಜ್ ಠಾಣೆಗೆ ದೂರು ನೀಡಿದ ಮೃತ ಬಾಲಕಿ ತಂದೆ ಸಿದ್ಧಾಂತ.ಆದರೆ ಪಕ್ಕದ ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಶಾನವಿ ಬಿದ್ದಿರುವ ದೃಶ್ಯ ಸೆರೆ. ಬಾಲಕಿ ಜೊತೆ ಟೆರಸ್ ಮೇಲೆ ಸಂಶಯಾಸ್ಪದ ರೀತಿ ಮಲತಾಯಿ ರಾಧಾ ಓಡಾಡುವ ದೃಶ ಸೆಪ್ಟೆಂಬರ್ 12 ನೇ ತಾರೀಖು ಮೃತ ಬಾಲಕಿ ತಂದೆ ಸಿದ್ಧಾಂತ ವಾಟ್ಸಾಪ್ಗೆ ಸಿಸಿಟಿವಿ ದೃಶ್ಯ ಕಳುಹಿಸಿದ ಪಕ್ಕದ ಮನೆ ಮಾಲೀಕ. ಸಿಸಿಟಿವಿ ದೃಶ್ಯ ಆಧರಿಸಿ ರಾಧಾ ವಿರುದ್ಧ ದೂರು ನೀಡಿದ ಮೃತ ಬಾಲಕಿ ಅಜ್ಜಿ. ಮೃತ ಶಾನವಿ ತಾಯಿ ಖಾಯಿಲೆಗೆ ತುತ್ತಾಗಿ ಕಳೆದ 6 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಬಳಿಕ 2023ರಲ್ಲಿ ರಾಧಾ ಜೊತೆ ಸಿದ್ಧಾಂತ ಎರಡನೇ ವಿವಾಹವಾದರು. ಸಿದ್ಧಾಂತ ಹಾಗು ರಾಧಾಗೆ ಎರಡು ಅವಳಿ ಮಕ್ಕಳು ಹುಟ್ಟಿದ ಬಳಿಕ ಸಿದ್ಧಾಂತರ ಮೊದಲನೇ ಮಗಳಿಗೆ ಕೊಲೆ ಮಾಡಿದ ಎರಡನೇ ಪತ್ನಿ.ದೂರು ದಾಖಲಿಸಿಕೊಂಡು ಆರೋಪಿ ರಾಧಾಳನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿರುವ ಪೊಲೀಸರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand