
ಲೈವ್ ಟಿವಿ ನ್ಯೂಸ್

ದಿನಾಂಕ : 12-09-2025
ಫರಹತಾಬಾದ ಪೊಲೀಸರ ಕಾರ್ಯಾಚರಣೆ ಮನೆಗಳ್ಳನ ಬಂಧನ
ವರದಿಗಾರರು : ಮಲ್ಲಿಕಾರ್ಜುನ್
ವರದಿ ಸ್ಥಳ :ಕಲಬುರ್ಗಿ
ಒಟ್ಟು ಓದುಗರ ಸಂಖ್ಯೆ : 14+
ಪೊಲೀಸ್ ಠಾಣೆಯಲ್ಲಿ ಗುರಪ್ಪ ಪೂಜಾರಿ ಯವರು ದಿನಾಂಕ: 04-08-2025 ರ ಬೆಳಿಗ್ಗೆ 11:00 ಗಂಟೆಯಿಂದ 05-08-2025 ರ ಸಾಯಂಕಾಲ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಆಲಮಾರದಲ್ಲಿದ್ದ ಬಂಗಾರದ ಹಾಗು ಬೆಳ್ಳಿ ಒಡವೆಗಳನ್ನೂ ಬೀಗ ಒಡೆದು ಕಳ್ಳತನ ಮಾಡಿದ್ದಾರೆಂದು ಹತ್ತಿರಾದ ಫರಹತಾಬಾದ ಪೊಲೀಸ್ ಠಾಣೆ ದೂರು ದಾಖಲಿಸಿರುತ್ತಾರೆ
ಸದರಿ ಪ್ರಕರಣದ ಆರೋಪಿತರ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ಆರೋಪಿತರಾದ ಜಗದೀಶ ತಂದೆ ಜ್ಯೋತೈಪ್ಪ ಬುಳ್ಳಾ ವಯ: 23 ವರ್ಷ, ಇವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸದರಿ ಆರೋಪಿತನು ಕಳ್ಳತನ ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡಿದ್ದು, ಸದರಿ ಆರೋಪಿತನಿಂದ ಕಳ್ಳತನ ಮಾಡಿದ ಒಟ್ಟು 3,22,000/- ರೂಪಾಯಿ ಮೌಲ್ಯದ 33 ಗ್ರಾಂ ಬಂಗಾರದ ಆಭರಣಗಳು ಹಾಗೂ 243 ಗ್ರಾಂ ಬೆಳ್ಳಿಯ ಆಭರಣಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿತನ ವಿರುದ್ದ ದಸ್ತಗಿರಿ ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಸದರಿ ಆರೋಪಿತನು ಈ ಮೊದಲು ದಿನಾಂಕ: 27-08-2025 ರಂದು ಫರಹತಾಬಾದ ಪೊಲೀಸ್ ಠಾಣೆ ಗುನ್ನೆ ನಂ. 107/2025 ಅಪಹರಣ ಮತ್ತು ಪೊಕ್ಸ ಪ್ರಕರಣದಲ್ಲಿನ ಬಂಧಿತ ಆರೋಪಿಯಾಗಿರುತ್ತಾನೆ
ಸದರಿ ಕಳ್ಳತನ ಪ್ರಕರಣದಲ್ಲಿನ ಆರೋಪಿತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮಾನ್ಯ ಪೊಲೀಸ್ ಆಯುಕ್ತರಾದ ಡಾ| ಶರಣಪ್ಪ ಎಸ್.ಡಿ., ಐ.ಪಿ.ಎಸ್ ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















