
ಲೈವ್ ಟಿವಿ ನ್ಯೂಸ್

ದಿನಾಂಕ : 13-09-2025
ಸರ್ಕಾರವು ಸೆಪ್ಟೆಂಬರ 22 ರಿಂದ ನಡೆಸಿರುವ ಜಾತಿಗಣತಿ ಕುರಿತು ಎರಡನೇ ಚಿಂತನಾ ಸಭೆ
ವರದಿಗಾರರು : ರಮೇಶ್ ಅಂಗಡಿ
ವರದಿ ಸ್ಥಳ :ಬಾಗಲಕೋಟೆ
ಒಟ್ಟು ಓದುಗರ ಸಂಖ್ಯೆ : 18+
ಪಂಚಮಸಾಲಿ ಜಾತಿಗಣತಿಗಾಗಿ ಚಿಕ್ಕೋಡಿಯಲ್ಲಿ ವಕೀಲರ ರಾಜ್ಯಕಾರ್ಯಕಾರಿಣಿಯ 2ನೇ ಚಿಂತನಾಸಭೆ 14 ನೇ ಸೆಪ್ಟೆಂಬರ್ 2025 ಭಾನುವಾರ ಮಧ್ಯಾಹ್ನ 3 ಕ್ಕೆ ,ಕೇಶವಕಲಾಭವನ ಹಳೆ ಮುನ್ಸಿಪಲ್ ಕಚೇರಿ ಚಿಕ್ಕೋಡಿ.ರಾಜ್ಯ , ಜಿಲ್ಲಾ , ತಾಲೂಕಿನ ಪಂಚಮಸಾಲಿ ವಕೀಲರು ತಪ್ಪದೇ ಅಗಮಿಸಿ , ನಾಡಿನ ಸಮಾಜ ಬಾಂಧವರಿಗೆ ಸಂದೇಶ ನೀಡಲು ಸಲಹೆಗಳನ್ನು ನೀಡಬೇಕೆಂದು ಕೂಡಲಸಂಗಮಲಿಂಗಾಯತಪಂಚಮಸಾಲಿಜಗದ್ಗುರು ಮಹಾಪೀಠದ ಪ್ರಥಮಜಗದ್ಗುರು ಬಸವಜಯಮೃತ್ಯುಂಜಯಸ್ವಾಮೀಜಿಯವರಿಂದ ಮನವಿ. ಅಡ್ವೊಕೇಟ್ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಎರಡನೇ ಚಿಂತನಾ ಸಭೆಗೆ ಆಮಂತ್ರಣ ಅಧ್ಯಕ್ಷರು ಹಾಗೂ ಸದಸ್ಯರುಪಂಚಮಸಾಲಿ-ಮಲೆಗೌಡ-ಗೌಡಲಿಂಗಾಯತ-ದೀಕ್ಷಾ ಲಿಂಗಾಯತ ವಕೀಲ ಅಡ್ವೊಕೇಟ್ ಪರಿಷತ್ ಇವರಿಗೆ ಶುಭಾಶೀರ್ವಾದಗಳು.
ವಕೀಲ ಬಂಧುಗಳೇ ರಾಜ್ಯ ಸರ್ಕಾರ ಇದೆ ತಿಂಗಳು ಜಾತಿಗಣತಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ನಮ್ಮ ಜನಸಂಖ್ಯೆ ನಿಖರವಾದ ಮಾಹಿತಿಗಾಗಿ ನಮ್ಮ ಮನೆಗೆ ಸರ್ಕಾರಿ ಸಿಬ್ಬಂದಿಗಳು ಬಂದಾಗ ಯಾವುದನ್ನು ಬರೆಯಿಸಬೇಕು ಎಂದು ನಾವುಗಳು ಸಮಾಜ ಭಾಂಧವರಿಗೆ ಸ್ಪಷ್ಟ ಸಂದೇಶ ಕೊಡಬೇಕಾಗುತ್ತದೆ.ಈಗಾಗಲೇ ಕಳೆದ ಜುಲೈ 13 ವಿಜಯಪುರದಲ್ಲಿ ರಾಜ್ಯ ಕಾರ್ಯಕಾರಿಣಿ ಮೊದಲ ಚಿಂತನಾ ಸಭೆ ನಡೆಸಲಾಗಿದೆ ಹಾಗೂ ಸಮಾಜದ ಜಿಲ್ಲಾ ಅಧ್ಯಕ್ಷರೊಂದಿಗೂ ಸಮಾಲೋಚನೆ ಮಾಡಲಾಗಿದೆ ಕೆಲವೇ ದಿನಗಳಲ್ಲಿ ಹಾಲಿ ಮಾಜಿ ಶಾಸಕರೊಂದಿಗೂ ಚರ್ಚಿಸಿ ಸಹಮತ ನಿರ್ಧಾರ ಕೈಗೊಳ್ಳಲಾಗುವುದು.
ಆದ್ದರಿಂದ ಚಿಕ್ಕೋಡಿ ಸಭೆಗೂ ಅಡ್ವೊಕೇಟ್ ಪರಿಷತ್ ಪದಾಧಿಕಾರಿಗಳು ,ಕಾನೂನು ತಜ್ಞರು ಹಾಗೂ ಬೆಳಗಾವಿ ಜಿಲ್ಲಾ ಎಲ್ಲಾ ಪಂಚಮಸಾಲಿ ಹಾಗೂ lpap ತಾಲೂಕು ಪದಾಧಿಕಾರಿಗಳು ಆಗಮಿಸಿ ಸಲಹೆಗಳನ್ನು ನೀಡಿ ಸಮಾಜಕ್ಕೆ ಸಂದೇಶ ನೀಡಬೇಕಾಗಿ ಮನವಿ.ಶರಣುಗಳೊಂದಿಗೆ ಪ್ರಥಮ ಜಗದ್ಗುರುಬಸವಜಯಮೃತ್ಯುಂಜಯಸ್ವಾಮೀಜಿ ಪಂಚಮಸಾಲಿ ಪೀಠ ,ಕೂಡಲಸಂಗಮಬಿ.ಎಲ್ ಪಾಟೀಲ್ ರಾಜ್ಯ ಮುಖ್ಯಸ್ಥರು ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















