ಲೈವ್ ಟಿವಿ ನ್ಯೂಸ್

ದಿನಾಂಕ : 12-09-2025

ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಕ್ರೀಡೆ ಅತ್ಯಗತ್ಯ…!

ವರದಿಗಾರರು : ಸಂಗನಗೌಡ ಗಬಸಾವಳಗಿ,
ವರದಿ ಸ್ಥಳ :ತಾಳಿಕೋಟಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 9+

ಕ್ರೀಡೆಯಿಲ್ಲದ ಜೀವನ ಕೀಟ ಹತ್ತಿದ ಮರದಂತಿದೆ ಎಂದು ಖ್ಯಾತ ನೇತ್ರ ತಜ್ಞ ಹಾಗೂ ಸಮಾಜಸೇವಕ ಡಾ. ಪ್ರಭುಗೌಡ ಲಿಂಗದಳ್ಳಿ ಹೇಳಿದರು. ತಾಳಿಕೋಟಿ ತಾಲೂಕು ಪೀರಾಪೂರ ಗ್ರಾಮದ ಎಸ್.ಬಿ. ಬಿರಾದಾರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ, ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಹಯೋಗದಲ್ಲಿ 2025-26 ನೇ ಸಾಲಿನ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಲಿಂಗದಳ್ಳಿ, ಭಾರತ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿಸಿದರೂ ಆರೋಗ್ಯದ ವಿಚಾರದಲ್ಲಿ ಹಿಂದೆಬಿದ್ದಿದೆ ಎಂದು ಅಭಿಪ್ರಾಯಪಟ್ಟರು. ಆರೋಗ್ಯಪೂರ್ಣ ಸಮಾಜ ಕಟ್ಟಿದಾಗ ಮಾತ್ರ ದೇಶ ಬಲವಾಗುತ್ತದೆ ಎಂದು ಕರೆ ನೀಡಿದರು. ಅಧ್ಯಕ್ಷರಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಅವರು, "ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ" ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ದೈಹಿಕ ಪರಿವೀಕ್ಷಕ ಬಿ.ವೈ. ಕವಡಿ, ಸೇರಿದಂತೆ ಅನೇಕ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand