ವರದಿಗಾರರು :
ರಮೇಶ ಬಿರಾದಾರ ||
ಸ್ಥಳ :
ರಾಯಚೂರು
ವರದಿ ದಿನಾಂಕ :
09-10-2025
ಬೆಳ್ಳಿಗೆ ಬಸ್ ಇಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆ: ಬಸ್ ಚಾಲಕರಿಗೆ ವಿದ್ಯಾರ್ಥಿಗಳಿಂದ ವಾಗ್ದಾಳಿ
ಕುರುಡಿಕ್ರಾಸ, ಅಕ್ಟೋಬರ್ 9 – ಬೆಳಿಗ್ಗೆ ಕಾಲೇಜಿಗೆ ಹೋಗುವ ಸಮಯದಲ್ಲಿ ಬಸ್ ಸಿಗದ ಕಾರಣ ಹಲವಾರು ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳ ಪ್ರಕಾರ, ಮುಂಜಾನೆ ಘಂಟೆಗಳಲ್ಲಿ ಬಸ್‌ಗಳು ತುಂಬಿದ ಸ್ಥಿತಿಯಲ್ಲಿ ಬಂದಿದ್ದು, ನಿಂತು ಹೋಗದೆ ಮುಂದುವರಿದಿವೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಬಸ್ ಹತ್ತಲಾಗದೆ ರಸ್ತೆಯಲ್ಲೇ ಉಳಿದಿದ್ದಾರೆ.
ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಕುರುಡಿಕ್ರಾಸ ಬಳಿ ಬಸ್‌ಅನ್ನು ಅಡ್ಡಗಟ್ಟು, ಚಾಲಕರಿಗೆ ನಿನ್ನೆಯೇ ಬಾಯಿಗೆ ಬಂದಂತೆ ಮಾತನಾಡಿರುವ ಘಟನೆ ನಡೆದಿದೆ. ಬಸ್ ಫುಲ್ ಇದ್ದ ಕಾರಣ ಚಾಲಕ ಅಲ್ಪಸಂಖ್ಯೆಯ ಪ್ರಯಾಣಿಕರನ್ನಾದರೂ ಒಳಗೆ ತೆಗೆದುಕೊಳ್ಳಲು ಅಸಾಧ್ಯವಾಯಿತೆಂದು ತಿಳಿಸಲಾಗಿದೆ.
ಬಸ್ ಚಾಲಕರು ತಮ್ಮ ಕಷ್ಟವನ್ನು ವ್ಯಕ್ತಪಡಿಸುತ್ತಾ, “ಬಸ್ ಈಗಾಗಲೇ ತುಂಬಿದ್ದು, ಇನ್ನಷ್ಟು ಜನರನ್ನು ಹತ್ತಿಸೋದು ಅಪಾಯಕಾರಿ” ಎಂದು ಹೇಳಿದರೂ ವಿದ್ಯಾರ್ಥಿಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಸ್ಥಳೀಯರು ಮತ್ತು ಅನೇಕ ಪ್ಯಾಸೆಂಜರ್‌ಗಳು ಘಟನೆಯನ್ನು ನಿಗದಿತ ಸಮಯದಲ್ಲಿ ಹೆಚ್ಚಿನ ಬಸ್‌ಗಳ ಅಗತ್ಯವಿದೆ ಎಂಬುದರ ಸಂಕೇತವೆಂದು ಅಭಿಪ್ರಾಯಪಟ್ಟಿದ್ದಾರೆ.
