ವರದಿಗಾರರು :
ಸಂಗನಗೌಡ ಗಬಸಾವಳಗಿ ||
ಸ್ಥಳ :
ವಿಜಯಪುರ
ವರದಿ ದಿನಾಂಕ :
04-11-2025
ಸಿ.ಬಿ. ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಸನ್ಮಾನ ಸಮಾರಂಭ
ತಾಳಿಕೋಟಿ: ತಾಳಿಕೋಟಿ ತಾಲ್ಲೂಕಿನ ಹರನಾಳ ಗ್ರಾಮದ ಸಹಕಾರ ಸಂಘದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಕಾಶೀಮಪಟೇಲ ಪಾಟೀಲ, ಉಪಾಧ್ಯಕ್ಷರಾಗಿ ಕಾಶಿನಾಥ ದೇಸಾಯಿ ಹಾಗೂ ಸಹಕಾರ ಸಂಘದ ಜಿಲ್ಲಾ ಯೂನಿಯನ್ ನಿರ್ದೇಶಕರಾಗಿ ಬಸವರಾಜ ಕುಂಬಾರ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಸಿ.ಬಿ. ಅಸ್ಕಿ ಫೌಂಡೇಶನ್ ಕೊಣ್ಣೂರ ಭವ್ಯ ಸನ್ಮಾನ ಸಮಾರಂಭವನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿತು.
ಈ ಸಂದರ್ಭದಲ್ಲಿ ದೇವರಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ ಮತ್ತು ಸಮಾಜ ಸೇವಕ ಸಿ.ಬಿ. ಅಸ್ಕಿಯ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾದ ಅಧಿಕಾರಿಗಳಿಗೆ ಶಾಲು ಹೊದಿಸಿ, ಗೌರವ ಫಲಕ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹಮದ್ ಖಾಜಿ, ಯುವ ಮುಖಂಡ ಶಿವರಾಜ ಗುಂಡಕನಾಳ (ನಾಗೂರ) ಸೇರಿದಂತೆ ಅತಿಥಿಗಳು ಮಾತನಾಡಿ, ಸಹಕಾರ ಸಂಘಗಳು ರಾಜಕೀಯ ವೇದಿಕೆಗಳಾಗಿ ಅಲ್ಲ, ಜನಸೇವೆಯ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕು. ಆಯ್ಕೆಯಾದ ನೂತನ ಅಧ್ಯಕ್ಷರು ತಮ್ಮ ಹುದ್ದೆಯ ಗೌರವ ಕಾಪಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂಬ ಸಲಹೆ ನೀಡಿದರು.
ಸನ್ಮಾನ ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಜೆಡಿಎಸ್ ಮುಖಂಡ ಮಡುಸೌಕಾರ ಬಿರಾದಾರ, ಇಬ್ರಾಹಿಂ ಮನ್ಸೂರ, ಆಸಿಫ್ ಕೆಂಭಾವಿ, ಭೀಮಾಶಂಕರ ಸೋನಾನಿ, ಸಂಗನಗೌಡ ದೇಸಾಯಿ, ಮೋದಿನಸಾ ನಗಾರ್ಚಿ, ಅಬೂಬಕರ ಲಾಹೋರಿ, ದ್ಯಾಮಣ್ಣ ಸೋಮನಾಳ, ಶಫೀಕ ಇನಾಮದಾರ, ಬಸ್ಸು ಮಾದರ, ಗೋಪಾಲ ಕಟ್ಟೀಮನಿ ಮತ್ತು ಇತರರು ಭಾಗವಹಿಸಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
