ವರದಿಗಾರರು :
ಇಮಾಮಸಾಬ ಹಣಬರಕಡಬಿ, ||
ಸ್ಥಳ :
ಸವದತ್ತಿ
ವರದಿ ದಿನಾಂಕ :
03-11-2025
ಯರಗಟ್ಟಿಯಲ್ಲಿ ಕಬ್ಬಿನ ಬಿಲ್ಲು ನಿಗದಿಪಡಿಸಬೇಕೆಂದು ರೈತರ ಹೋರಾಟ
ಯರಗಟ್ಟಿ: ಕಬ್ಬಿನ ಬಿಲ್ಲು ನಿಗದಿಪಡಿಸಬೇಕೆಂದು ರೈತರು ಶನಿವಾರ ಯರಗಟ್ಟಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾರೀ ಪ್ರತಿಭಟನೆ ನಡೆಸಿ ರಸ್ತೆ ತಡೆ ಹೋರಾಟ ನಡೆಸಿದರು.
ಪ್ರತಿಭಟನೆಯ ನಂತರ ರೈತ ಮುಖಂಡರು ತಹಶೀಲ್ದಾರ್ ಸಾಹೇಬರಿಗೆ ಮನವಿ ಸಲ್ಲಿಸಿ, ಕಬ್ಬಿನ ಬೆಲೆಯನ್ನು ಶೀಘ್ರದಲ್ಲಿ ಘೋಷಿಸಲು ಹಾಗೂ ರೈತರ ಶ್ರಮಕ್ಕೆ ನ್ಯಾಯ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಹೋರಾಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸೋಮು ರೈನಾಪುರ, ವೆಂಕಪ್ಪಾ, ಯಮನಪ್ಪ ಮಾಳಗಿ, ಕೆ.ಡಿ. ನದಾಫ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.
ಯರಗಟ್ಟಿ ತಾಲೂಕಿನ ನೂರಾರು ಕಬ್ಬು ಬೆಳೆಗಾರರು ಹಾಗೂ ರೈತರು ರಸ್ತೆ ತಡೆದು ಘೋಷಣೆಗಳೊಂದಿಗೆ ಉಗ್ರ ಪ್ರತಿಭಟನೆ ನಡೆಸಿದರು.
ರೈತರ ಬೇಡಿಕೆಗಳನ್ನು ಗಮನಿಸಿದ ತಹಶೀಲ್ದಾರ್ ಸಾಹೇಬರು ವಿಷಯವನ್ನು ಮೇಲಾಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು.
