ವರದಿಗಾರರು :
ದರ್ಶನ ಎಂ.ಎನ್. ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
03-11-2025
ಬದಿಯನಾಯಕನಹಳ್ಳಿ ಕಂದಾಯ ಗ್ರಾಮ ಘೋಷಣೆ: ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ
ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಬದಿಯನಾಯಕನಹಳ್ಳಿಯನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಿ, ಸುಮಾರು 40–50 ವರ್ಷಗಳಿಂದ ವಾಸಿಸುತ್ತಿದ್ದ ಗ್ರಾಮಸ್ಥರಿಗೆ ಸರ್ಕಾರದಿಂದ ಹಕ್ಕುಪತ್ರವನ್ನು ಜಿಲ್ಲಾ ಉಸ್ತುವಾರಿ ಹಾಗೂ ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಇಲಾಖೆಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ಗ್ರಾಮದಲ್ಲಿ ತುಳಜಾಭವಾನಿ ದೇವಸ್ಥಾನದ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಸಂಜೀವಿನಿ ಹೊಂಬೆಳಕು ಮಹಿಳಾ ಒಕ್ಕೂಟಕ್ಕೆ 8 ಲಕ್ಷ ರೂ. ಚೆಕ್ ವಿತರಣೆ ಮಾಡಲಾಯಿತು.
ಹಾಗೂ ದಾವಣಗೆರೆ ತಾಲ್ಲೂಕಿನ ಹೊಸಕಡ್ಲೇಬಾಳು ಗ್ರಾಮದ ವಾಲ್ಮೀಕಿ ನಗರದಲ್ಲಿ ನೂತನ ಬಸ್ ತಂಗುದಾಣವನ್ನು ನಿರ್ಮಿಸಿ ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಗಾನಹಳ್ಳಿ ಪರಶುರಾಮ, ಡಿಸಿಸಿ ಬ್ಯಾಂಕ್ ಸದಸ್ಯರು ಮುದೇಗೌಡ್ರು ಗಿರೀಶ್, ರಾಘವೇಂದ್ರ ನಾಯ್ಕ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಅಂಜಿಬಾಬು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ರತ್ನಿಬಾಯಿ, ಉಪಾಧ್ಯಕ್ಷ ಪ್ರಭಾಕರ್, ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಮಾಗಾನಹಳ್ಳಿ ರಾಜಣ್ಣ, ಕೃಷ್ಣನಾಯ್ಕ, ಕಾಳಾನಾಯ್ಕ, ಹಾಲ್ಯಾನಾಯ್ಕ, ಚಂದ್ರನಾಯ್ಕ, ತಹಶೀಲ್ದಾರ್ ಡಾ. ಅಶ್ವತ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ರಾಮಭೋವಿ, ಕಡ್ಲೇಬಾಳು ಪಿಡಿಓ ಚಂದನ್ ಕುಮಾರ್‌ಗಳು ಮತ್ತು ಬದಿಯನಾಯಕನಹಳ್ಳಿ ಹಾಗೂ ಹೊಸಕಡ್ಲೇಬಾಳು ಗ್ರಾಮಗಳ ಮುಖಂಡರು, ಗ್ರಾಮಸ್ಥರು ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
