ವರದಿಗಾರರು :
ಈ ಮಂಜುನಾಥ ||
ಸ್ಥಳ :
ಮರಿಯಮ್ಮನಹಳ್ಳಿ
ವರದಿ ದಿನಾಂಕ :
04-11-2025
ಮರಿಯಮ್ಮನಹಳ್ಳಿ ಹೋಬಳಿಯ ವಿದ್ಯಾರ್ಥಿಗಳಿಗೆ ಬಸ್ ತೊಂದರೆ: ಹೆಚ್ಚುವರಿ ಬಸ್ಸುಗಳ ಬೇಡಿಕೆ
ಮರಿಯಮ್ಮನಹಳ್ಳಿ ಹೋಬಳಿಯಿಂದ ಡಣಾನಾಯಕನಕೆರೆ, ಜಿ. ನಾಗಲಾಪುರ, ಗರಗ, ಯಶವಂತನಗರ ಹಾಗೂ ಸಂಡೂರು ತಾಲ್ಲೂಕು ಕಡೆಗೆ ತೆರಳುವ ಬಸ್ಸುಗಳಲ್ಲಿ ಪ್ರತಿದಿನ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿ–ವಿದ್ಯಾರ್ಥಿನಿಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ಸಮಸ್ಯೆಯನ್ನು ಮನಗಂಡು, ಡಣಾನಾಯಕನಕೆರೆ ಗ್ರಾಮ ಪಂಚಾಯಿತಿ ಸದಸ್ಯ ಹೆಚ್. ನಾಗಪ್ಪ ಅವರು ನಮ್ಮ ಹೋಬಳಿಯ ಗ್ರಾಮಗಳಿಗೆ ಹೆಚ್ಚುವರಿ ಬಸ್ಸುಗಳನ್ನು ನಿಯೋಜನೆ ಮಾಡಬೇಕೆಂದು ಸಾರಿಗೆ ಇಲಾಖೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್. ಲಕ್ಷ್ಮಣ, ಎಲ್. ಕೃಷ್ಣ, ಮರಿಯಮ್ಮನಹಳ್ಳಿ ಬಾವಿ ಪರುಶುರಾಮ, ಡಣಾನಾಯಕನಕೆರೆ ಪದ್ಮ, ವೆಂಕಟೇಶ್ (ಗ್ರಾ.ಪಂ. ಸದಸ್ಯರು), ಅಯ್ಯನಹಳ್ಳಿ ಆಜರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
