ವರದಿಗಾರರು :
ಮುತ್ತುರಾಜ ||
ಸ್ಥಳ :
ಕೊರಟಗೆರೆ
ವರದಿ ದಿನಾಂಕ :
03-11-2025
ಕೊರಟಗೆರೆ-ಮಧುಗಿರಿ ರಾಜ್ಯ ಹೆದ್ದಾರಿ (SH-3)ಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು
ಕೊರಟಗೆರೆ, ನವೆಂಬರ್ 3: ಕೊರಟಗೆರೆ-ಮಧುಗಿರಿ ರಾಜ್ಯ ಹೆದ್ದಾರಿ (SH-3)ಯ ಪಾಳು ಬಿದ್ದ ಟೋಲ್ ಬಳಿ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಮೃತರು ತುಂಬಾಡಿ ಮೂಲದ ವಿಜಯ್ ಕುಮಾರ್ (45) ಹಾಗೂ ಕಾಂತರಾಜು (45) ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ತುಂಬಾಡಿಯಿಂದ ಮಧುಗಿರಿಯ ಕಡೆಗೆ ತೆರಳುತ್ತಿದ್ದ ಬೈಕ್ ಪೆಮ್ಮೇದೇವರಹಳ್ಳಿ ಗೇಟ್ ಬಳಿ ತಿರುಗುವಾಗ, ಮಧುಗಿರಿ ಮಾರ್ಗದಿಂದ ಕೊರಟಗೆರೆಗೆ ಬರುತ್ತಿದ್ದ ವೇಗದ ಕಾರು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳೀಯರ ಪ್ರಕಾರ, ಪೆಮ್ಮೇದೇವರಹಳ್ಳಿ ತಿರುವಿನಲ್ಲಿ ಹೈಮಾಸ್ಟ್ ಬೀದಿ ದೀಪಗಳಿಲ್ಲದಿರುವುದು ಹಾಗೂ ಪಾಳು ಬಿದ್ದ ಟೋಲ್ ಬಳಿ ಗುಂಡಿಗಳಿದ್ದೇ ಇಂತಹ ಅಪಘಾತಗಳಿಗೆ ಕಾರಣವಾಗಿದೆ. “ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL) ಅಧಿಕಾರಿಗಳು ಈ ಕಡೆಗೆ ಯಾವುದೇ ಗಮನ ಹರಿಸುತ್ತಿಲ್ಲ. ಅನೇಕ ದೂರುಗಳಿದ್ದರೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ವಿಷಾದನೀಯ,” ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಪಘಾತದ ಸ್ಥಳಕ್ಕೆ ಕೊರಟಗೆರೆ ಠಾಣೆಯ ಸಬ್‌ಇನ್ಸ್ಪೆಕ್ಟರ್ ತೀರ್ಥೇಶ್, ASI ಪ್ರಸನ್ನಕುಮಾರ್, ಪ್ರದೀಪ್ ಹಾಗೂ ಗಣೇಶ್ ಭೇಟಿ ನೀಡಿ ತನಿಖೆ ಪ್ರಾರಂಭಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
