ವರದಿಗಾರರು :
ಮಂಜುನಾಥ್ ||
ಸ್ಥಳ :
ವಿಜಯನಗರ
ವರದಿ ದಿನಾಂಕ :
03-11-2025
ಹೊಸಪೇಟೆ: ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಹೊಸಪೇಟೆ, ವಿಜಯನಗರ: 2025–26ರಿಂದ 2029–30 ರವರೆಗೆ ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮಾನ್ಯ ಶ್ರೀ ಎಲ್. ಸಿದ್ದರಾಮಯ್ಯ ಮಲಪನಗುಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಉಪಾಧ್ಯಕ್ಷರಾಗಿ ಮಾನ್ಯ ಶ್ರೀ ಶಿವಾನಂದ ಮ.ಮ.ಹಳ್ಳಿ ದೇವಲಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಚುನಾವಣಾ ಕಾರ್ಯನಿರ್ವಹಣೆಯಲ್ಲಿ ಹಾಜರಿದ್ದವರು: ತಹಶೀಲ್ದಾರ ಶೃತಿ ಮಳ್ಳಪ್ಪಗೌಡ, ಸಹಾಯಕ ಚುನಾವಣಾಧಿಕಾರಿ ಶ್ರೀ ಕೃಷ್ಣನಾಯ್ಕ್, ಕಾರ್ಯದರ್ಶಿ ಎಂ. ಹುಲುಗಪ್ಪ, ಮತ್ತು ಹಿರಿಯರು ಬಂಡೆ ರಂಗಪ್ಪ, ಉಪ್ಪಿನ ಹನುಮಂತಪ್ಪ, ಅಯ್ಯಾಳಿ ತಿಮ್ಮಪ್ಪ, ಸಿದ್ದನಗೌಡ, ಸಂದೀಪ್ ಸಿಂಗ್, ಎಸ್. ಕೃಷ್ಣನಾಯ್ಕ್ (ಭಾರತೀಯ ಜನತಾ ಪಕ್ಷ, ಜಿಲ್ಲಾ ಉಪಾಧ್ಯಕ್ಷರು) ಹಾಜರಿದ್ದರು.
ಮಹತ್ವದ ಉಪಸ್ಥಿತಿಗಳಲ್ಲಿ ವಿ.ಎಸ್.ಎಸ್.ಎನ್ ಅಧ್ಯಕ್ಷರು ವಿಜಯಕುಮಾರ್, ನಿರ್ದೇಶಕರು ಎಂ. ಮಾಬುಸಾಹೇಬ್, ರಮೇಶ್, ಗ್ರಾಮ ಪಂಚಾಯತ್ ಸದಸ್ಯರು ಬ್ಯಾಲಕುಂದಿ ರಮೇಶ್, ಪೋತಲಕಟ್ಟಿ ಶೇಖರ್, ಪದ್ಮವೆಂಕಟೇಶ್, ಮತ್ತು ಅಯ್ಯನಹಳ್ಳಿ, ಗಮ್ಯ ನಾಯ್ಕ್ ಅಶೋಕ್ ಉಪಸ್ಥಿತರಿದ್ದರು.
ಸಂಘದ ಸದಸ್ಯರ ಸಮಗ್ರ ಸಮ್ಮತಿಯೊಂದಿಗೆ ಈ ಚುನಾವಣೆಯು ಯಶಸ್ವಿಯಾಗಿದೆ , ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ತಮ್ಮ ಸೇವಾ ಕಾಲವನ್ನು ಆರಂಭಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
