ವರದಿಗಾರರು :
ನಜ್ರುಲ್ಲ ಬೇಗ್, ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ರೇಣುಕಾ ಸ್ವಾಮಿ ಕೊಲೆ ಪ್ರಕರಣ :ದರ್ಶನ್ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ಕೋರ್ಟ್ ನಲ್ಲಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ A2 ಆರೋಪಿ ನಟ ದರ್ಶನ,A1ಆರೋಪಿ ಪವಿತ್ರ ಗೌಡ ಸೇರಿದಂತೆ ಒಟ್ಟು 17 ಮಂದಿ ಇಂದು 57ನೇ ಸೆಷನ್ ಕೋರ್ಟಿಗೆ ಹಾಜರಾಗಿದ್ದಾರೆ. ಇಂದು ಕೋರ್ಟ್ ನಲ್ಲಿ ಆರೋಪಿಗಳ ಮೇಲೆ ದೋಷಾರೋಪ ಫ್ರೇಮ್ ಮಾಡಲಿದ್ದು ಖುದ್ದು ಹಾಜರಾಗುವಂತೆ ಸೂಚಿಸಲಾಗಿತ್ತು ಭಾರಿ ಬಿಗಿ ಭದ್ರತೆಯೊಂದಿಗೆ ಆರೋಪಿಗಳನ್ನು ಕೋರ್ಟಿಗೆ ಕರೆತರಲಾಗಿದೆ.ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಆಧಾರಿತ ವಿಚಾರಣೆ ನಡೆಸಲಾಗುವುದು ಆರೋಪಿಗಳು ದೋಷಾರೋಪ ಒಪ್ಪಿಕೊಂಡರೆ ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಇದೆ ಇಲ್ಲದಿದ್ದರೆ ಸಾಕ್ಷಗಳ ಮೂಲಕ ವಿಚಾರಣೆ ನಡೆಯಲಿದೆ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
