ವರದಿಗಾರರು :
ಗಿರೀಶ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಅಮೆರಿಕದ ಸುಂಕ: ಭಾರತದ ರಫ್ತು ಶೇ 37.5ರಷ್ಟು ಕುಸಿತ
ನವದೆಹಲಿ ನವಂಬರ್ 3 ಅಮೆರಿಕವು ಪ್ಯಾರಿಫ್ ವಿಧಿಸಿದ ಪರಿಣಾಮವಾಗಿ ಭಾರತದ ರಫ್ತು ಗಣನಿ ಯವಾಗಿ ಕುಸಿದಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿ ಟಿ ಆರ್ ಐ ) ವರದಿಯ ಪ್ರಕಾರ 2025ರ ಮೇ ತಿಂಗಳಿಂದ ಸೆಪ್ಟೆಂಬರ್ ವರೆಗೂ ಅಮೆರಿಕಕ್ಕೆ ಭಾರತದ ರಫ್ತು ಶೇಕಡ 37.5 ರಷ್ಟು ಕಡಿಮೆಯಾಗಿದೆ. ಈ ಐದು ತಿಂಗಳಲ್ಲೇ ರಫ್ತು 8.8 ಬಿಲಿಯನ್ ಡಾಲರ್ ಗಿಂತ 5.5 ಬಿಲಿಯನ್ ಡಾಲರ್ ಗೆ ಕುಸಿದಿದೆ. ಸ್ಮಾರ್ಟ್ ಫೋನ್ ಮತ್ತು ಫಾರಂ ಸೆಕ್ಟರ್ಗಳಲ್ಲಿ ರಫ್ತು ಕುಸಿತ ಹೆಚ್ಚಾಗಿದ್ದು ಸ್ಮಾರ್ಟ್ ಫೋನ್ ರಫ್ತು ಶೇಕಡ 58 ರಷ್ಟು ಮತ್ತು ಫಾರ್ಮ್ ಸರಕುಗಳ ರಫ್ತ್ತು ಶೇಕಡ 15.7ರಷ್ಟು ಕುಸಿದಿದೆ. ಔದ್ಯಮಿಕ ಲೋಹಗಳು, ಬಿಡಿ ಭಾಗಗಳು, ಕಬ್ಬಿಣ,ಉಕ್ಕು, ಜವಳಿ,ಆಭರಣ ರಾಸಾಯನಿಕ, ಕೃಷಿ,ಆಹಾರ ಯಂತ್ರೋಪಕರಣಗಳ ರಫ್ತಿನಲ್ಲೂ ಇಳಿಮುಖವಾಗಿದೆ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
