ವರದಿಗಾರರು :
ಮುತ್ತುರಾಜ್ ||
ಸ್ಥಳ :
ಕೊರಟಗೆರೆ
ವರದಿ ದಿನಾಂಕ :
03-11-2025
70ನೇ ಕನ್ನಡ ರಾಜ್ಯೋತ್ಸವದ ದಿನ ಹೊಸಕೋಟೆ ಶಾಲೆಯಲ್ಲಿ ಶಿಕ್ಷಕ ಹರೀಶ್ ರವರಿಗೆ ಬೀಳ್ಕೊಡುಗೆ ಸಮಾರಂಭ
ಹೊಸಕೋಟೆ, ಕೊರಟಗೆರೆ ತಾಲ್ಲೂಕು: 70ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಮೋಘ ವರ್ಷ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಹೊಸಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಹರೀಶ್ ರವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಯಿತು.
ಮುಖ್ಯ ಅತಿಥಿ ಡಾ. ಹನುಮಂತನಾಥ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠ, ಎಲೆರಾಪುರ, ಕನ್ನಡದ ಮಹತ್ವ, ಭಾಷಾ ಗೌರವ ಮತ್ತು ಸ್ಥಳೀಯ ಸಾಹಿತ್ಯ-ಸಂಸ್ಕೃತಿ ಉಳಿವಿಗಾಗಿ ಶಿಕ್ಷಣದಲ್ಲಿ ತೊಡಗಿರುವ ಶಿಕ್ಷಕರ ಶ್ರಮವನ್ನು ಪ್ರಸ್ತುತಪಡಿಸಿದರು. ಅವರು ಹರೀಶ್ ರವರ ಸಾಧನೆಗಳ ಬಗ್ಗೆ ಹೇಳುತ್ತ, ಮಕ್ಕಳಿಗೆ ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಹಾಗೂ ತಂತ್ರಜ್ಞಾನ ತರಬೇತಿಯನ್ನು ನೀಡಿರುವುದನ್ನು ವಿಶೇಷವಾಗಿ ಉಲ್ಲೇಖಿಸಿದರು.
ಡಾ. ಸ್ವಾಮೀಜಿಯವರು ಹೇಳಿದರು, “ಒಬ್ಬ ನಿಷ್ಠಾವಂತ ಶಿಕ್ಷಕ ಮನಸ್ಸು ಮಾಡಿದರೆ, ಇಡೀ ಊರು ಮತ್ತು ನಾಡನ್ನು ಬೆಳೆಸಬಹುದು. ಹೊಸಕೋಟೆ ಶಾಲೆಯ ಮಕ್ಕಳು ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಸಾಧನೆಗಳನ್ನು ತೋರಿಸಿದ್ದಾರೆ. ಹರೀಶ್ ರವರು ಯಾವುದೇ ಜಾತಿ ಅಥವಾ ಗುಂಪುಗಾರಿಕೆ ಇಲ್ಲದೆ ಅತ್ಯುತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.”
ಗ್ರಾಮ ಪಂಚಾಯಿತಿ ಸದಸ್ಯರು, ನಿವೃತ್ತ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 7 ವರ್ಷಗಳ ಸೇವೆ ನಂತರ ಹರೀಶ್ ರವರಿಗೆ ಅವರ ಮುಂದಿನ ಹುದ್ದೆಗೆ ಯಶಸ್ಸು ಕೋರುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
