ವರದಿಗಾರರು :
ಕಿಶೋರ್ ಎ.ಸಿ., ||
ಸ್ಥಳ :
ಕೃಷ್ಣರಾಜಪೇಟೆ
ವರದಿ ದಿನಾಂಕ :
04-11-2025
ಮಂಡ್ಯ ಡಿ.ಸಿ. ಕಚೇರಿಯ ಮುಂದೆ ರೈತ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ
ಮಂಡ್ಯ, ನವೆಂಬರ್ 4 (ಮಂಗಳವಾರ): ಜಮೀನು ವಿವಾದಕ್ಕೆ ಪರಿಹಾರ ದೊರೆಯದೆ ಬೇಸರಗೊಂಡ ರೈತ ಮಂಡ್ಯ ಡಿ.ಸಿ. ಕಚೇರಿಯ ಎದುರು ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕೆ.ಆರ್. ಪೇಟೆ ತಾಲ್ಲೂಕಿನ ಮೂಡನಹಳ್ಳಿ ಗ್ರಾಮದ ಮಂಜೇಗೌಡ (ವಯಸ್ಸು ತಿಳಿದುಬರಬೇಕಿದೆ) ಎಂಬ ರೈತರು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಈ ಕೃತ್ಯಕ್ಕೆ ಮುಂದಾದರು.
ಮಂಜೇಗೌಡ ಅವರು ತಮ್ಮ ಜಮೀನು ಸಂಬಂಧಿತ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹಲವು ದಿನಗಳಿಂದ ತಾಲ್ಲೂಕು ಕಚೇರಿ ಮತ್ತು ಡಿ.ಸಿ. ಕಚೇರಿಗಳಿಗೆ ಓಡಾಡುತ್ತಿದ್ದರು. ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾದ ಅವರು ಈ ಅತಿ ದುರಂತ ಕ್ರಮ ಕೈಗೊಂಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಪೋಲಿಸರು ಹಾಗೂ ಸಾರ್ವಜನಿಕರು ತಕ್ಷಣ ಬೆಂಕಿ ಆರಿಸಿ, ಗಾಯಗೊಂಡ ಮಂಜೇಗೌಡರನ್ನು ಮಂಡ್ಯ ಜಿಲ್ಲಾ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪ್ರಕಾರ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದ್ದು, ಜೀವಕ್ಕೆ ಅಪಾಯವಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆ ಹಿನ್ನೆಲೆಯಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
