ವರದಿಗಾರರು :
ನಾಗರಾಜ್ ||
ಸ್ಥಳ :
ಬಳ್ಳಾರಿ
ವರದಿ ದಿನಾಂಕ :
04-11-2025
ಬಾದಾಮಿ ಅಡೆಗಲ್ ಗ್ರಾಮದಲ್ಲಿ ಹೋಳಿ ಹಬ್ಬದ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿ
ಬಾದಾಮಿ ತಾಲೂಕು ಅಡೆಗಲ್ ಗ್ರಾಮದಲ್ಲಿ ಲಿಂಂ ಶ್ರೀ ಶ್ರೀ ಶ್ರೀ ಶಂಕ್ರಯ್ಯ ಮಹಾ ಸ್ವಾಮಿಗಳ 73ನೇ ಪುಣ್ಯ ಆರಾಧನೆ ಕಾರ್ಯಕ್ರಮದ ಅಂಗವಾಗಿ ಹೋಳಿ ಹಬ್ಬದ ಸಂದರ್ಭದಲ್ಲಿ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಮಾರಂಭದಲ್ಲಿ ಭಾಗವಹಿಸಿ ಸಮುದಾಯದ ಕಲ್ಯಾಣಕ್ಕಾಗಿ ಶುಭಕೋರಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಾದಾಮಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹುಣ್ಣಪ್ಪ ಕತ್ತೆಣ್ಣ, ಎಸ್ ಟಿ ಮೋರ್ಚ್ ಜಿಲ್ಲೆಯ ಅಧ್ಯಕ್ಷ ತಿಪ್ಪಣ್ಣ ಸಂಜೀವಗೋಳ, ಪ್ರಧಾನ ಕಾರ್ಯದರ್ಶಿ ಹನುಮಂತ ಪೂಜಾರಿ, ಉಪಾಧ್ಯಕ್ಷ ಮುರಳಪ್ಪ, ಶಾಸಕರು ಗಣೇಶ್ ಲಿಂಗವೇ, ಜೆಡಿಎಸ್ ಮುಖಂಡ ಭೀಮಸೇನಾ ಚಿಮ್ಮನಕಟ್ಟೆ, ಹಾಗೂ ಹನುಮಂತ.ಮಾವಿನ ಮಠದ ಗಿರೀಶ್ ಶೆಟ್ರು, ರಮೇಶ್ ಮತ್ತು ಇತರ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ ಬಂಗಾರ ಹನುಮಂತಪ್ಪ, ಎಸ್ ಟಿ ಮಾರ್ಚ್ ರಾಜ್ಯಾಧ್ಯಕ್ಷ ಉದ್ಘಾಟಿಸಿದರು. ಸಮೂಹಿಕ ವಿವಾಹ ಕಾರ್ಯಕ್ರಮವು ಸ್ಥಳೀಯ ಸಮುದಾಯದ ಒಗ್ಗಟ್ಟಿನ ಸಂಕೇತವಾಗಿ ನಡೆಯಿತು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
