ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
04-11-2025
ಕೆಂಭಾವಿ ಪಟ್ಟಣದಲ್ಲಿ 100 ನೇ ವರ್ಷದ ಪಥ ಸಂಚಲನಕ್ಕೆ ಸ್ವಯಂಸೇವಕರ ಸಂಘ ಸಿದ್ದ
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಹೋಬಳಿಯಲ್ಲಿ ಆರ್ ಎಸ್ ಎಸ್ ನ 100ನೇ ವರ್ಷದ ಸಂಭ್ರಮಾಚರಣೆಯನ್ನು ರಾಜ್ಯಾದ್ಯಂತ ಪ್ರತಿ ತಾಲೂಕಿನಲ್ಲಿ ಕೂಡ ಆಚರಿಸಲು ನಿರ್ಧಾರ ಮಾಡಿದೆ ಅದೇ ರೀತಿಯಾಗಿ ನಾಳೆ ದಿನಾಂಕ 4/11/2025 ರಂದು ಕೆಂಭಾವಿ ಪಟ್ಟಣದಲ್ಲಿ ನಡೆಯುವ ಆರ್ ಎಸ್ ಎಸ್ ಪತಸಂಚಲನಕ್ಕೆ ಅನುಮತಿ ಸಿಕ್ಕಾಗಿದೆ ಕೆಂಭಾವಿಯ ಮುಖ್ಯಬೀದಿಗಳು ರಂಗು ರಂಗಾಗಿ ರಾರಾಜಿಸುತ್ತಿವೆ ಹಾಗೂ ನಾಳೆ 3:00 ಘಂಟೆ ಯಿಂದ ಪಥಸಂಚಲ ನಡೆಯುತ್ತದೆ ಎಂದು ಆರ್‌ಎಸ್ ಎಸ್ ಕಾರ್ಯಕರ್ತರು ಉಲ್ಲಾಸದಿಂದ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ
ಆದರೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಪೊಲೀಸ್ ಇಲಾಖೆಯ ಮಾರ್ಗ ಸೂಚಿಯಂತೆ ನಡೆಯಬೇಕು ಎಂದು ಆದೇಶ ಹೊರಡಿಸಿದ್ದಾರೆ
ಅದೇ ದಿನದಂದು ಡಿಎಸ್ಎಸ್ ಸಂಘಟನೆಗೂ ಕೈಯಲ್ಲಿ ಸಂವಿಧಾನ ಹಿಡಿದು ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದು ನಮ್ಮ ಬಾವುಟವನ್ನು ಹಿಡಿದು ನಾವು ಸಂಚಲನ ಮಾಡುತ್ತೇವೆ ನಮಗೂ ಅನುಮತಿ ಸರಕಾರ ನೀಡಬೇಕು ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿ ವಾಗಿದೆ ಇದನ್ನು ಯಾವ ರೀತಿಯಾಗಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಾರೆ ಎಂದು ನೋಡಬೇಕಿದೆ ಎರಡು ಸಂಘಟನೆಗಳ ಮಧ್ಯೆ ನಡೆದಿರುವ ಜಟಾಪಟಿಯಲ್ಲಿ ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಕೇಳಿ ಬರುತ್ತಿದೆ ನಾಳೆ ಏನಾಗುವುದು ಕಾದು ನೋಡಬೇಕಿದೆ ಎಂದು ಸಾರ್ವಜನಿಕರು ಆತುರದಿಂದ ಕಾಯುತ್ತಿದ್ದಾರೆ
ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಉಲ್ಲೇಖವಾಗಿರುವ ಅಂಶಗಳು ಕೆಳಗಿನಂತಿವೆ
1) ಕಾರ್ಯಕ್ರಮದ ಸ್ಥಳವು ಪ್ರಾರಂಭವಾದಾಗಿನಿಂದ ಮುಕ್ತಾಯದವರೆಗೂ ಯಾವುದೇ ರೀತಿಯ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾದರೆ ಆ ನಷ್ಟದ ಸಂಪೂರ್ಣ ವೆಚ್ಚವನ್ನು ಸಂಘಟನೆಯ ಸಂಚಾಲಕರು ಬರಿಸಬೇಕು 2) ಪೊಲೀಸ್ ಇಲಾಖೆಯಿಂದ ನಿಗದಿಪಡಿಸಿದ ಮಾರ್ಗವನ್ನು ಬಿಟ್ಟು ಬೇರೆ ಯಾವುದೇ ಮಾರ್ಗವನ್ನು ಬಳಸುವಂತಿಲ್ಲ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ವ್ಯವಸ್ಥೆಯನ್ನು ಕೈಗೊಳ್ಳ ತಕ್ಕದ್ದು 3) ಪತ ಸಂಚಲನ ನಡೆಸುವ ಸಮಯದಲ್ಲಿ ಯಾವುದೇ ಜಾತಿ, ಧರ್ಮಗಳ ಭಾವನೆಗಳಿಗೆ ಧಕ್ಕೆ ಉಂಟಾಗುವ ಘೋಷಣೆಗಳನ್ನು ಕೂಗುವಂತೆಲ್ಲ ಹಾಗೂ ಕೋಮು ಗಲಭೆ ಉಂಟಾಗುವಂತಹ ಯಾವುದೇ ಚಟುವಟಿಕೆ ಮಾಡುವಂತಿಲ್ಲ 4) ಪತ ಸಂಚಲನ ನಡೆಸುವ ಸಮಯದಲ್ಲಿ ಯಾವುದೇ ಸಂಘಟಕರು ರಸ್ತೆ ಬಂದ್ ಮಾಡಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುವಂತಿಲ್ಲ
5) ಪತ ಸಂಚಲನದಲ್ಲಿ ಪಾಲುಗೊಳ್ಳುವವರು ಯಾವುದೇ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಉಂಟು ಮಾಡುವುದು ಶಾಂತಿಸುವವಸ್ಥೆಗೆ ಭಂಗ ತರುವಂತ ಕೆಲಸವನ್ನು ಮಾಡುವಂತಿಲ್ಲ
6) ಪತ ಸಂಚಲನ ಸಮಯದಲ್ಲಿ ಯಾವುದೇ ರೀತಿಯ ಅಂಗಡಿ ಮುಂಗಟುಗಳನ್ನು ಬಲವಂತವಾಗಿ ಬಾಗಿಲುಗಳನ್ನು ಮುಚ್ಚಿಸುವಂತಿಲ್ಲ 7) ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾದಲ್ಲಿ ಸಂಘಟನೆಯೇ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ 8) ಪತ ಸಂಚಲನ ನಡೆಯುವ ಸಂದರ್ಭದಲ್ಲಿ ಯಾವುದೇ ಹಿಂಸಚಾರ ಘಟನೆಗಳು ಸಂಭವಿಸಿದಲ್ಲಿ ನೀವೇ ಸಂಪೂರ್ಣ ಹೊಣೆಗಾರರು 9) ಪೊಲೀಸ್ ಇಲಾಖೆಯ ವತಿಯಿಂದ ನೀಡಿರುವ ಮತ್ತು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಬದ್ಧರಾಗಿರತಕ್ಕದ್ದು 10) ಪತ ಸಂಚಲನ ನಡೆಯುವ ಸಂದರ್ಭ ದಲ್ಲಿ ಯಾವುದೇ ರೀತಿಯ ಮಾರಕಸ್ತ್ರಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಸೂಚನೆ ಪಥ ಸಂಚಲನ ಸಮಯದಲ್ಲಿ ಈ ಶರತುಗಳಲ್ಲಿ ಯಾವುದೇ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಮಾನ್ಯ ಜಿಲ್ಲಾಧಿಕಾರಿಗಳ ಉಲ್ಲೇಖದಲ್ಲಿ ತಿಳಿಸಿದ್ದಾರೆ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
