ವರದಿಗಾರರು :
ಸತ್ತಪ್ಪ ||
ಸ್ಥಳ :
ಧಾರವಾಡ
ವರದಿ ದಿನಾಂಕ :
15-09-2025
ಮೀನು ಮಾರಾಟ ಗಾರರಿಗೆ ಗಾರ್ಡನ್ ಅಂಬ್ರೇಲಾ ಪ್ರವೀಣ ಮಂಜುನಾಥ ಮಡಿವಾಳ, ಕೆರಗಜ್ನಿ
ನಮ್ಮೂರಿನ ಗ್ರಾಮಸ್ತರಿಗೆ ಕಳೆದ ಅನೇಕ ವರ್ಷಗಳಿಂದ ರುಚಿಕರವಾದ ಮೀನು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಮಣಕೋಣ ಊರಿನವರಾದ ಭಾಗಕ್ಕ, ಕಾವೇರಕ್ಕ, ಸಂಗೀತಾ ಹರಿಕಾಂತ, ಇವರು ಮಳೆ ಬಿಸಿಲು ಎನ್ನದೇ ಮೀನು ಮಾರಾಟ ಮಾಡುತ್ತಾ ಇರುತ್ತಿದ್ದರು. ಇದನ್ನು ಮನಗಂಡು ಇವರಿಗೆ ನಮ್ಮೂರಿನ ವರಾದ ಶ್ರೀ ಪ್ರವೀಣ ಮಂಜುನಾಥ ಮಡಿವಾಳ, ಕೆರಗಜ್ನಿ. ಇವರು ಗಾರ್ಡನ್ ಅಂಬ್ರೇಲಾ (ಕೊಡೆ) ಯನ್ನು ಮೂರೂರಿನ ಮಾಜಿ ತಾ ಪಂ ಸದಸ್ಯರಾದ ಬಾಲಕೃಷ್ಣ ನಾಯಕ್ ಇವರ ಮುಖಾಂತರ ಹಸ್ತಾಂತರಿಸಿ ಮಾನವಿಯತೆ ಮೆರೆದಿದ್ದಾರೆ. ಇವರಿಗೆ ಮೂರೂರಿನ ಸಮಸ್ತ ನಾಗರಿಕರ ಪರವಾಗಿ ಅಭಿನಂದನೆಗಳು.
ಇವರ ಜೊತೆಯಲ್ಲಿ : ವಿನಾಯಕ ನಾಯ್ಕ, ನಾಗೇಶ ಕೊಡಿಯಾ,ಶನಿಯಾರ ಗೌಡ,ನಾಗರಾಜ ನಾಯ್ಕ, ರಮೇಶ ಶೆಟ್ಟಿ,ಸುರೇಶ ನಾಯ್ಕ,ಪ್ರಶಾಂತ ಆಚಾರಿ.ಮಿಥುನ್ ನಾಯ್ಕ, ಮಹೇಶ ನಾಯ್ಕ, ಯಂಕು ಗೌಡ, ರವಿ ನಾಯ್ಕ, ನಾಗರಾಜ ಮುಕ್ರಿ, ಮಧುಕರ. ಮಾರುತಿ ಮುಕ್ರಿ, ಮುಂತಾದವರು ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು.
