ವರದಿಗಾರರು :
ಹುಲುಗಪ್ಪ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
19-10-2025
ರಮೇಶ್ ಕತ್ತಿ ಅವರೇ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆಯ ನಿಜ ಮುಖ ಬಯಲು
ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಇತ್ತೀಚಿನ ಚುನಾವಣೆಯಲ್ಲಿ ರಮೇಶ್ ಕತ್ತಿ ಅವರ ಗುಂಪು ಪಡೆದ ಗೆಲುವು ಅಹಂಕಾರದ ಗೆಲುವು ಅಲ್ಲ, ಅದು ಮೋಸದ ಮತ್ತು ಅನ್ಯಾಯದ ಫಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಿಜವಾದ ಸಂಗತಿಗಳು ಈ ಕೆಳಗಿನಂತಿವೆ:
ಪ್ರತಿ ಬೂತ್‌ಗಳಲ್ಲಿ ಡೂಪ್ಲಿಕೇಟ್ ಮತದಾನ: ಪ್ರತಿ ಮತಗಟ್ಟೆಯಲ್ಲೂ ಸುಮಾರು 150 ಕೃತಕ (ಡೂಪ್ಲಿಕೇಟ್) ಮತಗಳನ್ನು “ಚೈನ್ ಟು ಚೈನ್” ವಿಧಾನದಲ್ಲಿ ಹಾಕುವ ಮೂಲಕ ಜನರ ನಿಜವಾದ ಇಚ್ಛೆಯನ್ನು ಕುಗ್ಗಿಸಲಾಗಿದೆ.
ಯುವಕರಿಂದ ಕಳ್ಳ ಮತದಾನ: ಮತದಾನಕ್ಕೆ ಸಂಬಂಧವಿಲ್ಲದ ಯುವಕರನ್ನು ಏಜೆಂಟ್‌ಗಳಾಗಿ ನೇಮಿಸಿ, ಅವರಿಂದಲೇ ಕಳ್ಳ ಮತದಾನ ಮಾಡಿಸಲಾಗಿದೆ. ಇದು ಪ್ರಜಾಪ್ರಭುತ್ವದ ಅವಮಾನವಾಗಿದೆ.
ಬೋಗಸ್ ಸಿಬ್ಬಂದಿ ನೇಮಕ: ಚುನಾವಣೆಯ ಸಮಯದಲ್ಲಿ ಸುಮಾರು 300 ಬೋಗಸ್ ಸಿಬ್ಬಂದಿಗಳನ್ನು ನೇಮಿಸಿ, ಮತದಾನ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲಾಗಿದೆ.
ಜನಮದ್ದಿನಲ್ಲಿ ಅಸಮಾನ ಶಕ್ತಿ ಪ್ರದರ್ಶನ: ನೀವು ಒಂದು ಕ್ರೂಜರ್ ತುಂಬಲು ಹರಸಾಹಸಪಟ್ಟರೆ, ನಮ್ಮ ಬಳಗವು ಪ್ರತಿಗ್ರಾಮದಲ್ಲೂ 10 ರಿಂದ 15 ವಾಹನಗಳಷ್ಟು ಜನರನ್ನು ತರಲು ಸಾಧ್ಯವಾಯಿತು — ಇದು ಜನಮನ್ನಣೆಯ ಸಾಕ್ಷಿ.
ನಿಮ್ಮ ನಿಜ ಉದ್ದೇಶ ಬಯಲು: ನೀವು ಕೇವಲ ನಾಲ್ಕು ಅಭ್ಯರ್ಥಿಗಳು ಗೆದ್ದರೆ ಸಾಕೆಂದು ಹೇಳಿಕೊಂಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತು. ಜನರ ಮುಂದೆ ಇದು ಸ್ವಾಭಿಮಾನದ ಗೆಲುವಲ್ಲ, ಮೋಸದ ಹಾಗೂ 420 ರೀತಿಯ ಗೆಲುವು ಎಂದು ಸ್ಪಷ್ಟವಾಗಿದೆ.
ಪಿಕೆಪಿಎಸ್ ಸದಸ್ಯರ ಬಂಧನದಂತ ಪರಿಸ್ಥಿತಿ: ಚುನಾವಣೆಯ ಸಮಯದಲ್ಲಿ ಪಿಕೆಪಿಎಸ್ ಸದಸ್ಯರನ್ನು ವಿ.ಎಸ್.ಎಲ್. ಗೋಡೌನಿನಲ್ಲಿ ಕೈದಿಯರಂತೆ ಇಟ್ಟುಕೊಂಡಿದ್ದು ಅತ್ಯಂತ ನಾಚಿಕೆಗೇಡಿತನದ ಕೆಲಸವಾಗಿದೆ. “ಹಣ ಖರ್ಚಾಗಬಾರದು, ಅಧಿಕಾರ ಮಾತ್ರ ಬೇಕು” ಎಂಬ ನಿಮ್ಮ ಧೋರಣೆ ಜನರ ಕಣ್ಣು ತೆರೆದಿದೆ.
ಈಗ ನೀವು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಹಿಂದೆ ನಿಂತು ಪ್ರಶ್ನೆ ಕೇಳಬೇಕು — ನೀವು ಅಧಿಕಾರದಲ್ಲಿದ್ದಾಗ ಈ ಅಕ್ರಮಗಳನ್ನು ಯಾಕೆ ಬಹಿರಂಗಪಡಿಸಲಿಲ್ಲ? ಜನರು ಈಗ ಎಲ್ಲವನ್ನು ಅರ್ಥಮಾಡಿಕೊಂಡಿದ್ದಾರೆ. ನಿಜ ಮತ್ತು ನ್ಯಾಯದ ಶಕ್ತಿ ಯಾವಾಗಲೂ ಮೋಸದ ಮೇಲುಗೈ ಸಾಧುಸುತ್ತದೆ
