ವರದಿಗಾರರು :
ತೌಕೀರ್ ಖತೀಬ್ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
24-10-2025
ಡಿಸಿಸಿ ಬ್ಯಾಂಕ್‌ನಲ್ಲಿ ಹಾಲುಮತ ಸಮಾಜಕ್ಕೆ ಪ್ರಾಶಸ್ತ್ಯ: ಜಾರಕಿಹೊಳಿ ಭರವಸೆ
ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರ (ಡಿಸಿಸಿ) ಬ್ಯಾಂಕ್ ಅಭಿವೃದ್ಧಿಗೆ ಹಾಲುಮತ ಸಮಾಜಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.
ಬ್ಯಾಂಕಿನ ಮುಂದಿನ ಯೋಜನೆಗಳ ಕುರಿತು ಮಾತನಾಡಿದ ಅವರು, “ನಮ್ಮ ಜಿಲ್ಲೆಯಲ್ಲಿ ಯಾವುದೇ ಸಮಾಜಕ್ಕೂ ಅನ್ಯಾಯ ಮಾಡಿಲ್ಲ. ಎಲ್ಲ ಸಮಾಜದವರ ಸಹಕಾರದೊಂದಿಗೆ ಬಿಸಿಸಿ ಬ್ಯಾಂಕ್ ಅಭಿವೃದ್ಧಿ ಪಡಿಸುತ್ತೇವೆ,” ಎಂದು ಹೇಳಿದರು.
ಬ್ಯಾಂಕ್‌ನ ಸುಸ್ಥಿರ ಪ್ರಗತಿ ಹಾಗೂ ಗ್ರಾಮೀಣ ಆರ್ಥಿಕ ಬಲವರ್ಧನೆಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
