ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
17-10-2025
ತೋವಿನಕೆರೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್-ಕಾರ್ಯದರ್ಶಿ 8,000 ರೂ. ಲಂಚದಲ್ಲಿ ಬಂಧನ
ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ನಿವಾಸಿ ಟಿ.ಕೆ. ಮೊಹಮ್ಮದ್, ಮಂಜಮ್ಮ ರವರ ಹೆಸರಿನಲ್ಲಿದ್ದ ಮನೆ ಮತ್ತು ಖಾಲಿ ನಿವೇಶನವನ್ನು ಖರೀದಿಸಿ ಖಾತೆ ಬದಲಾವಣೆಗಾಗಿ ದಿನಾಂಕ 12/08/2025 ರಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಎರಡು ತಿಂಗಳಾದರೂ ಕಚೇರಿ ಅಧಿಕಾರಿಗಳು ಖಾತೆ ಬದಲಾವಣೆ ಮಾಡದ ಕಾರಣ, ಟಿ.ಕೆ. ಮೊಹಮ್ಮದ್ ಅವರು ದೂರು ನೀಡಿದ್ದರು. ನಂತರ ಬಿಲ್ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾರವರು ಖಾತೆ ಬದಲಾವಣೆಗೆ 8,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಟಿ.ಕೆ. ಮೊಹಮ್ಮದ್ ಲಂಚ ನೀಡಲು ಇಚ್ಚಿಸದೆ, 15/10/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದರು. ದಿನಾಂಕ 16/10/2025 ರಂದು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪೊಲೀಸರು ಬೆಳಿಗ್ಗೆ 10.45 ಗಂಟೆಗೆ ಲಂಚ ಸ್ವೀಕರಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು. ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ಮತ್ತು ಉಪಾಧ್ಯಕ್ಷರಾದ ಡಾ. ಸಂತೋಷ್ ಕೆ.ಎಂ. ನೇತೃತ್ವದ ತಂಡ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿತ್ತು.
